ಉಪ್ಪಿನಂಗಡಿ: ಅರಣ್ಯ ರಕ್ಷಕನಿಗೆ 15ದಿನಗಳ ನ್ಯಾಯಾಂಗ ಬಂಧನ

ಉಪ್ಪಿನಂಗಡಿ, ಜ.10: ಮರ ಕಡಿಯಲು ಅರಣ್ಯ ಇಲಾಖೆಯ ಅನುಮತಿ ನೀಡಲು ಲಂಚ ಸ್ವೀಕರಿಸುವ ವೇಳೆ ಎಸಿಬಿ ಪೊಲೀಸರಿಂದ ಬಂಧಿತನಾದ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಕಚೇರಿಯ ಅರಣ್ಯ ರಕ್ಷಕ ಸುಧೀರ್ ಎನ್.ಗೆ ನ್ಯಾಯಾಲಯ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಖಾಸಗಿ ಸ್ವಾಮ್ಯದ ಭೂಮಿಯಲ್ಲಿನ ಮರವನ್ನು ಕಡಿಯುವ ಸಂಬಂಧ ಅರಣ್ಯ ಇಲಾಖೆಯ ಅನುಮತಿ ಪಡೆಯಲು ಬೆಳ್ತಂಗಡಿ ತಾಲೂಕಿನ ಉರುವಾಲು ನಿವಾಸಿ ಸಿದ್ದೀಕ್ ಅಕ್ಬರ್ ಅವರ ಬಳಿ 15 ಸಾವಿರ ಲಂಚದ ಬೇಡಿಕೆ ಇಟ್ಟಿದ್ದು, 10 ಸಾವಿರ ರೂ.ಗಳನ್ನು ಪಡೆದಿದ್ದಾರೆ ಎನ್ನಲಾಗಿದೆ. ಬುಧವಾರದಂದು ಮೂರು ಸಾವಿರ ರೂ. ಪಡೆಯುತ್ತಿದ್ದ ವೇಳೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

Also Read  ಪೊಲೀಸರ ಕರ್ತವ್ಯಕ್ಕೆ ಅಡ್ಡಿ, ಚೆಕ್ ಪೋಸ್ಟ್ ಧ್ವಂಸ ➤ 15 ಮಂದಿಯ ವಿರುದ್ಧ ಪ್ರಕರಣ ದಾಖಲು

error: Content is protected !!
Scroll to Top