ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಪ್ರಶಸ್ತಿ

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.10   ಉತ್ತಮ ಸಾಧನೆಗೈದ ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ನೀಡುವ ಪ್ರಶಸ್ತಿ ದ.ಕ ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪ್ರವೀಣ್ ಎಂ.ಪಿ ಅವರಿಗೆ ದೊರೆತಿದೆ.

ದೆಹಲಿಯಲ್ಲಿ ನಡೆದ ಎಪಿವೈ ಫೆಲಿಸ್ಟೇಷನ್ ಕಾರ್ಯಕ್ರಮದಲ್ಲಿ ಭಾರತ ಸರ್ಕಾರದ ಪಿ.ಎಫ್.ಆರ್.ಡಿ.ಎ. ವತಿಯಿಂದ ಎ.ಪಿ.ವೈ ನಾಗರಿಕರ ಆಯ್ಕೆ ಅಭಿಯಾನದಲ್ಲಿ ಈ ಪ್ರಶಸ್ತಿಯನ್ನು ಗುರುವಾರ ನೀಡಲಾಯಿತು.

Scroll to Top