ಉಕ್ರೇನಿನ ವಿಮಾನವನ್ನು ಇರಾನ್ ಹೊಡೆದುರುಳಿಸಿದೆ: ಟ್ರಂಪ್ 

ವಾಷಿಂಗ್ಟನ್, ಜ.10: ಸುಮಾರು 180 ಪ್ರಯಾಣಿಕರು ಸೇರಿದಂತೆ ಸಿಬ್ಬಂದಿಯನ್ನು ಹೊತ್ತು ಸಾಗಿದ್ದ ಉಕ್ರೇನಿನ ವಿಮಾನವನ್ನು ಟೆಹ್ರಾನ್ ನಲ್ಲಿ ಇರಾನ್ ಹೊಡೆದುರುಳಿಸಿದೆ ಎಂದು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅನುಮಾನ ವ್ಯಕ್ತಪಡಿಸಿದ್ದಾರೆ.

ಉಕ್ರೇನ್ ದೇಶದ ಅಂತಾರಾಷ್ಟ್ರೀಯ ಬೋಯಿಂಗ್ 737-800 ವಿಮಾನ ರಷ್ಯಾದ ಕೀವ್ ಎಂಬಲ್ಲಿಗೆ ಹೊರಟಿತ್ತು. ಇರಾನ್ ದೇಶದ ಟೆಹ್ರಾನ್​ನ ವಿಮಾನ ನಿಲ್ದಾಣದಲ್ಲಿ ಇಳಿದು ಮತ್ತೆ ಹೊರಟ ಕೆಲವೇ ಕ್ಷಣಗಳಲ್ಲಿ ವಿಮಾನ ಅಪಘಾತಕ್ಕೀಡಾಗಿತ್ತು. ಈ ಅಪಘಾತದಲ್ಲಿ 180 ಜನ ಮೃತಪಟ್ಟಿದ್ದರು. ಈ ಬಗ್ಗೆ ಮಾತನಾಡಿರುವ ಡೊನಾಲ್ಡ್​ ಟ್ರಂಪ್​, “ಈ ವಿಮಾನ ನೆರೆಯ ರಾಷ್ಟ್ರದಲ್ಲಿ ಹಾರಾಟ ನಡೆಸುತ್ತಿತ್ತು. ಯಾರೋ ತಪ್ಪು ಮಾಡಿದ್ದಾರೆ ಎನ್ನುವ ಅನುಮಾನ ನನಗಿದೆ,” ಎಂದು ಟ್ರಂಪ್​ ಹೇಳಿದ್ದಾರೆ.

ಈ ಕುರಿತು ಅಮೆರಿಕಾ ಮಾಧ್ಯಮಗಳು ಪ್ರತಿಕ್ರಿಯಿಸಿದ್ದು ಇರಾನ್ ಈ ವಿಮಾನವನ್ನು ತಪ್ಪಾಗಿ ಹೊಡೆದುರುಳಿಸಿವೆ ಎಂದು ವರದಿ ಮಾಡಿವೆ. ಮಾತ್ರವಲ್ಲದೆ ಅಮೆರಿಕಾದ ಅಧಿಕಾರಿಯೋರ್ವರು ಇರಾನ್ ವಾಯು ಪಡೆ ಉಕ್ರೇನ್ ವಿಮಾನವನ್ನು ಆಕಸ್ಮಿಕವಾಗಿ  ಹೊಡೆದುರುಳಿಸಿರಬಹುದು ಎಂದು ಹೇಳಿಕೆ ನೀಡಿದ್ದಾರೆ.

Also Read  ಬಲ್ಯ ದೇವಸ್ಥಾನಕ್ಕೆ ಭೇಟಿ ನೀಡಿದ ವಿದೇಶೀ ಭಕ್ತರು ► ನವರಾತ್ರಿ ಉತ್ಸವದಲ್ಲಿ ಭಾಗಿ

ಇರಾನ್ ದೇಶದ ಸೇನಾ ಮುಖ್ಯಸ್ಥ ಖಾಸಿಂ ಸೊಲೈಮನಿ ಹತ್ಯೆಯಿಂದಾಗಿ ಕಳೆದ ಒಂದು ವಾರದಿಂದ ಅಮೆರಿಕ ಮತ್ತು ಇರಾನ್ ನಡುವೆ ಯುದ್ಧದ ವಾತಾವರಣ ನಿರ್ಮಾಣವಾಗಿತ್ತು. ಇದೇ ವೇಳೆಗೆ ಇರಾನ್​ ನೆಲದಲ್ಲಿ ಉಕ್ರೇನ್ ವಿಮಾನ ನೆಲಕ್ಕುರುಳಿದ್ದು ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿತ್ತು. ಆದರೆ ತನಿಖೆ ನಡೆಸಿ ವರದಿ ನೀಡಿರುವ ಇರಾನ್ ನಾಗರೀಕ ವಾಯುಯಾನ ಸಂಸ್ಥೆ “ವಿಮಾನ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದ ಸಂದರ್ಭದಲ್ಲೇ ಬೆಂಕಿ ಕಾಣಿಸಿಕೊಂಡಿದೆ. ವಿಮಾನದ ಇಂಜಿನ್​ನ ಒಂದು ಭಾಗ ಮಿತಿಮೀರಿ ಬಿಸಿಯಾಗಿದ್ದಕ್ಕೆ ಸಾಕ್ಷಿಗಳಿವೆ. ಅಲ್ಲದೆ, ವಿಮಾನ ನೆಲಕ್ಕೆ ಅಪ್ಪಳಿಸುವ ಮುನ್ನವೇ ಬೆಂಕಿಗೆ ಆಹುತಿಯಾಗಿತ್ತು” ಎಂದು ತಿಳಿಸಿದೆ.

Also Read  ಹಮಾಸ್ ಮುಖ್ಯಸ್ಥನ ಕೊನೆ ಕ್ಷಣದ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

error: Content is protected !!
Scroll to Top