ಉಡುಪಿ: ಜೈಲಿನಿಂದ ಬಿಡುಗಡೆಗೊಂಡ ಯುವಕ ನೇಣು ಬಿಗಿದು ಆತ್ಮಹತ್ಯೆ

ಉಡುಪಿ, ಜ.7: ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಮೂರು ತಿಂಗಳ ಕಾಲ ಜೈಲು ಶಿಕ್ಷೆ ಅನುಭವಿಸಿ ಜೈಲಿನಿಂದ ಬಿಡುಗಡೆಯಾಗಿದ್ದ ಯುವಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಟಪಾಡಿ ಕೋಟೆ ಗ್ರಾಮದ ಸಾಕಂಬಾಡಿ ಎಂಬಲ್ಲಿ ನಡೆದಿದೆ.

Nk Kukke

ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಪೀಟರ್‌ ಡಿಸಿಲ್ವಾ ಎಂಬವರ ಪುತ್ರ ಆತೀಶ್‌ ಡಿಸಿಲ್ವಾ (23) ಎಂದು ಗುರುತಿಸಲಾಗಿದೆ. ಯುವಕನು ವೃತ್ತಿಯಲ್ಲಿ ಪೈಂಟರ್‌ ಆಗಿದ್ದು ಸುಮಾರು 5 ತಿಂಗಳ ಹಿಂದೆ ಮಣಿಪಾಲದಲ್ಲಿ ನಡೆದ ದರೋಡೆ ಪ್ರಕರಣದಲ್ಲಿ ಆರೋಪಿಯಾಗಿದ್ದು ಮೂರು ತಿಂಗಳ ಕಾಲ ಜೈಲು ಶಿಕ್ಷೆ ಅನುಭವಿಸಿ ಕಳೆದ ನವೆಂಬರ್‌ನಲ್ಲಿ ಬಿಡುಗಡೆಯಾಗಿದ್ದ. ಜೈಲಿನಿಂದ ಬಿಡುಗಡೆಯಾದ ಯುವಕ ಆನಂತರ ಕೆಲಸಕ್ಕೆ ಹೋಗದೆ ಮನೆಯಲ್ಲಿಯೇ ಇದ್ದು ಚಿಂತೆಗೀಡಾದಂತೆ ಕಂಡು ಬರುತ್ತಿದ್ದ ಎಂದು ಮೃತ ಯುವಕನ ಅಣ್ಣ ದೂರಿನಲ್ಲಿ ತಿಳಿಸಿದ್ದಾರೆ. ಸೋಮವಾರ ಬೆಳಗ್ಗೆ ಮನೆಯವರು ಎದ್ದು ನೋಡಿದಾಗ ಆತ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಆತ್ಮಹತ್ಯೆಗೆ ಕಾರಣ ಏನು ಎಂದು ಈವರೆಗೂ ತಿಳಿದುಬಂದಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿ ಕಾಪು ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.

Also Read  ಮುಖ್ಯಮಂತ್ರಿಗಳ ಸಭೆಯಲ್ಲಿ ಸಮರ್ಪಕ ಮಾಹಿತಿ ಒದಗಿಸಲು ಸೂಚನೆ

 

 

error: Content is protected !!
Scroll to Top