ಮುಳ್ಳೇರಿಯಾದಲ್ಲಿ ಭೀಕರ ರಸ್ತೆ ಅಪಘಾತ: ದಂಪತಿ ಸ್ಥಳದಲ್ಲೇ ಮೃತ್ಯು

ಕಾಸರಗೋಡು, ಜ.6: ಬೈಕ್ ಮತ್ತು ಕಾರಿನ ಮಧ್ಯೆ ಉಂಟಾದ ಭೀಕರ ರಸ್ತೆ ಅಪಘಾತದಲ್ಲಿ ದಂಪತಿ ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ ಮುಳ್ಳೇರಿಯಾ ಸಮೀಪ ದ ಕಾರಡ್ಕದಲ್ಲಿ ನಡೆದಿದೆ.

 

 

 

ಮೃತಪಟ್ಟವರನ್ನು ಗೋವಿಂದ ರಾಜ್ ( 53) ಮತ್ತು ಪತ್ನಿ ಉಮಾವತಿ ( 42 ) ಎಂದು ಗುರುತಿಸಲಾಗಿದೆ. ಗೋವಿಂದರಾಜ್ ಮತ್ತು ಪತ್ನಿ ಸಂಚರಿಸುತ್ತಿದ್ದ ಬೈಕ್ ಗೆ ಎದುರಿನಿಂದ ಬಂದ ಇನ್ನೋವಾ ಕಾರು ಢಿಕ್ಕಿ ಹೊಡೆದಿದ್ದು, ಬೈಕನ್ನು ಮೀಟರ್ ಗಳಷ್ಟು ದೂರ ಕಾರು ಎಳೆದೊಯ್ದಿದೆ. ದಂಪತಿಗಳು ಅಪಘಾತದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆದೂರು ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಮುಂದಿನ ಕ್ರಮ ತೆಗೆದುಕೊಂಡಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಮೃತಪಟ್ಟ ದಂಪತಿ ಮೂಲತ: ತಮಿಳುನಾಡು ನಿವಾಸಿಗಳಾಗಿದ್ದು, ಕಾರಡ್ಕದಲ್ಲಿ ವಾಸವಾಗಿದ್ದಾರೆ. ಗೋವಿಂದ ರಾಜ್ ಮುಳ್ಳೇರಿಯದಲ್ಲಿ ಸೆಲೂನ್ ಅಂಗಡಿ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.

Also Read  ನೀವು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಬೇಕೇ..? ► ಪ್ರವರ್ಗ 'ಬಿ' & 'ಸಿ' ದೇವಸ್ಥಾನದ ಸಮಿತಿಗೆ ಅರ್ಹರಿಂದ ಅರ್ಜಿ ಆಹ್ವಾನ

 

error: Content is protected !!
Scroll to Top