ಪತಿಗಾಗಿ ಇಬ್ಬರ ಪತ್ನಿಯರ ಜಗಳ: ಒಬ್ಬಾಕೆಯ ಕೊಲೆಯಲ್ಲಿ ಅಂತ್ಯ

ವಿರಾಜಪೇಟೆ, ಜ.5: ಒಬ್ಬ ಗಂಡನಿಗಾಗಿ ಇಬ್ಬರು ಪತ್ನಿಯರ ಜಗಳ ಒಬ್ಬಾಕೆಯ ಕೊಲೆಯಲ್ಲಿ ಅಂತ್ಯವಾದ ಘಟನೆ ಮಡಿಕೇರಿ ಜಿಲ್ಲೆ ವಿರಾಜಪೇಟೆ ತಾಲೂಕಿನ ಬಳಂಜಬೆರೆಯ ಕಾಫಿ ಎಸ್ಟೇಟ್ ನ ಲೈನ್ ಮನೆಯಲ್ಲಿ ನಡೆದಿದೆ.

ಕೊಲೆಯಾದ ಮಹಿಳೆಯನ್ನು ವಶಿಕಾ ದೇವಿ (27) ಎಂದು ಗುರುತಿಸಲಾಗಿದೆ. ಆಕೆಯ ಸಹೋದರಿ ಅಶಿಕಾ ಕೊಲೆ ಗೈದ ಆರೋಪಿಯಾಗಿದ್ದು, ಆಕೆ ಪರಾರಿಯಾಗಿದ್ದಾಳೆ. ಕಾಫಿ ತೋಟದಲ್ಲಿ ಕೆಲಸ ಮಾಡುವ ಜಾರ್ಖಂಡ್ ಮೂಲದ ದಯಾನಂದ್ ಎಂಬಾತ ಕಳೆದ ಏಳು ವರ್ಷಗಳ ಹಿಂದೆ ಅಶಿಕಾಳನ್ನು ಮದುವೆಯಾಗಿದ್ದ. ಇದಾದ ಕೆಲವೇ ವರ್ಷಗಳ ನಂತರ ಅಶಿಕಾಳ ಸಹೋದರಿ ವಶಿಕಾಳನ್ನು ಪ್ರೀತಿಸಿ ವಿವಾಹವಾಗಿದ್ದ. ಈ ಮೂವರೂ ಒಂದೇ ಮನೆಯಲ್ಲಿ ಸಂಸಾರ ನಡೆಸುತ್ತಿದ್ದರು.

Also Read  ಸುಬ್ರಹ್ಮಣ್ಯ: ಕಾಡಾನೆ ದಾಳಿ..!!! ➤ ಯುವಕನ ಸ್ಥಿತಿ ಚಿಂತಾಜನಕ

Nk Kukke

ಇತ್ತೀಚೆಗೆ ಕೆಲ ದಿನಗಳಿಂದ ಅಶಿಕಾ ಮತ್ತು ವಶಿಕಾ ನಡುವೆ ಜಗಳವಾಗುತ್ತಿತ್ತು. ಶನಿವಾರ ಸಂಜೆ ಕಾಫಿ ತೋಟದಿಂದ ಬಂದ ನಂತರ ಮನೆಯಲ್ಲಿ ಇವರಿಬ್ಬರಿಗೂ ಜಗಳವಾಗಿದೆ. ಅದು ವಿಪರೀತಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದೆ. ಅಕ್ಕ ಅಶಿಕಾ ತಂಗಿ ವಶಿಕಾಳನ್ನು ಕತ್ತಿಯನ್ನು ಕಡಿದು ಕೊಲೆಗೈದು ಪರಾರಿಯಾಗಿದ್ದಾಳೆ. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!
Scroll to Top