ತುಮಕೂರು, ಜ.4: ಬಸ್‌ ಮತ್ತು ಕಾರು ಢಿಕ್ಕಿ ಸಂಭವಿಸಿದ್ದು ಕಾರಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಅದರಲ್ಲಿದ್ದ ಮೂವರು ಸಜೀವದಹನಗೊಂಡಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ದೊಡ್ಡಗುಣಿ ಬಳಿ ಶನಿವಾರ ಬೆಳಗ್ಗಿನ ಜಾವ ನಡೆದಿದೆ.

ಮೃತರು ಗುಬ್ಬಿ ತಾಲೂಕಿನ ಎನ್. ಹೊಸಹಳ್ಳಿ ಗ್ರಾಮದವರು ಎನ್ನಲಾಗಿದ್ದು, ಮೃತರನ್ನು ವಸಂತ್​ಕುಮಾರ್​​​​(45), ನರಸಮ್ಮ(60), ರಾಮಯ್ಯ(55) ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಇತರ ಮೂವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ತುಮಕೂರು ಜಿಲ್ಲಾ ಆಸ್ಪತ್ರೆ ಗೆ ದಾಖಲಿಸಲಾಗಿದೆ. ಬಸ್ ಬೆಂಗಳೂರಿಂದ ಶಿವಮೊಗ್ಗ ಕಡೆಗೆ ತೆರಳುತ್ತಿತ್ತು ಎಂದು ತಿಳಿದು ಬಂದಿದೆ. ಅದೃಷ್ಟವಶಾತ್​​ ಬಸ್​​ನಲ್ಲಿದ್ದ 40 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗುಬ್ಬಿ ಸರ್ಕಲ್ ಇನ್ಸ್​​​ಪೆಕ್ಟರ್​​ ದೀಪಕ್ ಹೆಗ್ಡೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗುಬ್ಬಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Also Read  ಪುತ್ತೂರು: ಹಿಂದೂ ವ್ಯಕ್ತಿಯ ಮನೆಯಲ್ಲಿ ಮುಸ್ಲಿಂ ಮಹಿಳೆ..!!