ಸಿಗಂಧೂರು ಚೌಡೇಶ್ವರಿ ಅಮ್ಮನವರ ಮಹಿಮೆ

ಲೇಖನ: ತಾಂತ್ರಿಕ್ ಶ್ರೀ ಗಿರಿಧರ ಭಟ್
9945410150

ಸಿಗಂದೂರು ಚೌಡೇಶ್ವರಿ ಅಮ್ಮನವರ ಮಹಿಮೆ.

ಈ ಸುಕ್ಷೇತ್ರ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿದೆ. ಶರಾವತಿ ನದಿಯ ಹಿನ್ನೀರಿನ ಸುಂದರ ಪ್ರದೇಶದಲ್ಲಿ ಈ ದೇಗುಲವನ್ನು ನಾವು ಕಾಣಬಹುದು.
ಶೇಷಪ್ಪ ಎಂಬುವರ ಕನಸಿನಲ್ಲಿ ಪ್ರತ್ಯಕ್ಷವಾಗಿ ದೇವಾಲಯವನ್ನು ನಿರ್ಮಿಸುವುದಕ್ಕೆ ತಾಯಿ ತಿಳಿಸುವಳು, ಅಮ್ಮನವರ ಆಣತಿಯಂತೆ ದೇಗುಲವನ್ನು ಪ್ರತಿಷ್ಠಾಪಿಸಲಾಯಿತು. ಈ ದೇವಸ್ಥಾನವು ಸುಮಾರು 300 ವರ್ಷಗಳ ಇತಿಹಾಸ ಹೊಂದಿದೆ. ಇದು ಸ್ವಯಂ ವಿಗ್ರಹ ಕೂಡ ಹೌದು.
ಜಮೀನು ಅಥವಾ ಜಾಗದಲ್ಲಿ ಸಮಸ್ಯೆ ಉದ್ಭವಿಸಿದರೆ ಚೌಡೇಶ್ವರಿ ಅಮ್ಮನವರ ಕ್ಷೇತ್ರಕ್ಕೆ ಬಂದು ಭಕ್ತಿಯಿಂದ ಪೂಜೆ ಸಲ್ಲಿಸಿದರೆ ಖಂಡಿತವಾಗಿ ಸಮಸ್ಯೆ ಸುಲಭವಾಗಿ ಬಗೆಹರಿಯುತ್ತದೆ.
ಅಮೂಲ್ಯ ವಸ್ತುಗಳು ಕಳ್ಳತನವಾಗಿದ್ದರೆ ಅಥವಾ ಕಳೆದುಕೊಂಡಿದ್ದರೆ ಈ ದೇಗುಲದಲ್ಲಿ ಭಕ್ತಿಯಿಂದ ನಮಿಸಿದಲ್ಲಿ ನಿಮ್ಮ ವಸ್ತು ನಿಶ್ಚಿತವಾಗಿ ಸಿಗುತ್ತದೆ.
ತಾಯಿ ತನ್ನ ಮಕ್ಕಳನ್ನು ರಕ್ಷಿಸುವಂತೆ ದೇವಿಯು ತನ್ನ ಭಕ್ತರ ರಕ್ಷಣೆಗೆ ಸದಾ ಸಿದ್ಧಳಿರುತ್ತಾಳೆ. ನಮ್ಮ ಇಷ್ಟಾರ್ಥಗಳು ಅಥವಾ ತೊಂದರೆಯನ್ನು ಅಮ್ಮನವರ ಬಳಿ ಹೇಳಿಕೊಂಡರೆ ಒಳ್ಳೆಯ ದಾರಿ ಹಾಗೂ ಸಮಸ್ಯೆಯಿಂದ ಪಾರುಮಾಡುವರು. ನೀವು ಒಮ್ಮೆ ಈ ಕ್ಷೇತ್ರದ ದರ್ಶನ ಭಾಗ್ಯವನ್ನು ಮಾಡಿ ಪುನೀತರಾಗಿ.

Also Read  ಗಂಡ-ಹೆಂಡತಿಯ ನಡುವೆ ಕಲಹ ಉಂಟಾಗುತ್ತಿದ್ದರೆ ತಪ್ಪದೇ ಈ ನಿಯಮ ಪಾಲಿಸಿ

ಪ್ರಧಾನ ತಾಂತ್ರಿಕ್ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
9945410150

error: Content is protected !!
Scroll to Top