(ನ್ಯೂಸ್ ಕಡಬ) newskadaba.com, ಕಡಬ, ಜ.2 ವಿಶ್ವ ನಾಯಕರಾಗಿ ಹೊರಹೊಮ್ಮಿದ ಪ್ರಧಾನಿ ನರೇಂದ್ರ ಮೋದಿಯವರು ಈ ದೇಶವನ್ನು ಬಲಿಷ್ಟ ರಾಷ್ಟ್ರವನ್ನಾಗಿಸುವ ನಿಟ್ಟಿನಲ್ಲಿ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ, ಅವುಗಳನ್ನು ಯಶಸ್ವಿಯಾಗಿ ಅನುಷ್ಟಾನ ಮಾಡುವ ಮೂಲಕ ಪ್ರಧಾನಿಯವರ ಕನಸನ್ನು ಸಾಕಾರಗೊಳಿಸೋಣ ಎಂದು ರಾಮಕುಂಜ ಕ್ಷೇತ್ರದ ತಾಲೂಕು ಪಂಚಾಯಿತಿ ಸದಸ್ಯೆ ಜಯಂತಿ ಆರ್ ಗೌಡ ಹೇಳಿದರು.
ಅವರು ಮಂಗಳವಾರ ಸಂಜೆ ಕೊೈಲ ಹಾಗೂ ರಾಮಕುಂಜ ಗ್ರಾಮದ ಉಪ್ಪಿನಂಗಡಿ-ಸಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಗೋಳಿತ್ತಡಿ ಜಂಕ್ಷನ್‍ನಲ್ಲಿ ಅಳವಡಿಸಲಾದ ತಾಲೂಕು ಪಂಚಾಯಿತಿಯ ಅನುದಾನ ಸುಮಾರು ಒಂದು ಲಕ್ಷ ರೂ ವೆಚ್ಚದ ಬೀದಿ ವಿದ್ಯತ್ ದೀಪವನ್ನು ಉದ್ಘಾಟಿಸಿ ಮಾತನಾಡಿದರು. ಗೋಳಿತ್ತಡಿಯಲ್ಲಿ ಬೀದಿ ದೀಪದ ಅವಶ್ಯಕತೆಯನ್ನು ಈ ಭಾಗದ ಸಾರ್ವಜನಿಕರು ಈ ಹಿಂದೆ ಬೇಡಿಕೆ ಇಟ್ಟಿದ್ದರು. ಅದನ್ನು ಪೂರೈಸಲಾಗಿದೆ, ರಾಮಕುಂಜ ಶ್ರೀ ರಾಮಕುಂಜೇಶ್ವರ ದೇವಸ್ಥಾನಕ್ಕೆ ಹೋಗುವ ರಸ್ತೆಯ ಕಾಜರೊಕ್ಕು ಬಳಿ ಕೂಡಾ ಬೀದಿ ದೀಪ ಅಳವಡಿಸಲು ಬೇಡಿಕೆಯಿದೆ, ಇದನ್ನು ಸ್ಥಳಿಯಾಡಳಿತದ ನೆರವಿನೊಂದಿಗೆ ಅನುಷ್ಟಾನ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು. ತೆಂಗಿನ ಕಾಯಿ ಒಡೆಯುವ ಮೂಲಕ ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಗೋಳಿತೊಟ್ಟು ಕ್ಷೇತ್ರದ ತಾಲೂಕು ಪಂಚಾಯಿತಿ ಸದಸ್ಯೆ ತೇಜಸ್ವಿನಿ ಶೇಖರ ಗೌಡ, ಬಿಜೆಪಿ ನೆಲ್ಯಾಡಿ ಮಹಾಮಂಡಲ ಅಧ್ಯಕ್ಷ ಧರ್ಮಪಾಲ ರಾವ್ ಕಜೆ, ಸುಳ್ಯ ಮಂಡಲ ಕಾರ್ಯದರ್ಶಿ ಲಕ್ಷ್ಮೀನಾರಾಯಣ ರಾವ್ ಆತೂರು, ಗುತ್ತಿಗೆದಾರ ರಾಜೇಶ್ ಶೆಟ್ಟಿ ಸಂಪ್ಯಾಡಿ, ಕೊೈಲ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಾಲಕೃಷ್ಣ ಗೌಡ ಬೇಂಗದಪಡ್ಪು, ಅಧ್ಯಕ್ಷೆ ಹೇಮಾಮೋಹನ್ ದಾಸ್ ಶೆಟ್ಟಿ, ಉಪಾಧ್ಯಕ್ಷೆ ವಿಜಯಶೇಖರ ಅಂಬಾ, ಸದಸ್ಯರಾದ ಸುಂದರ ನಾಯ್ಕ, ಸುರೇಶ್ ಪಟ್ಟೆ, ತಿಮ್ಮಪ್ಪ ಗೌಡ ಸಂಕೇಶ, ರಾಮಕುಂಜ ಗ್ರಾಮ ಪಂಚಾಯಿತಿ ಸದಸ್ಯರಾದ ದಯಾನಂದ ಪೊಸಮಣ್ಣು, ಯತೀಶ್ ಬಾನಡ್ಕ, ಪ್ರಮುಖರಾದ ಸುಭಾಸ್ ಶೆಟ್ಟಿ ಆರ್ವಾರ, ಮೋಹನ್‍ದಾಸ್ ಶೆಟ್ಟಿ ಬಡಿಲ ಮತ್ತಿತರರು ಉಪಸ್ಥಿತರಿದ್ದರು. ರಾಮಕುಂಜ ಗ್ರಾಮ ಪಂಚಾಯತಿ ಅಧ್ಯಕ್ಷ ಪ್ರಶಾಂತ್ ಆರ್.ಕೆ ಸ್ವಾಗತಿಸಿ, ವಂದಿಸಿದರು.