ಚಿತ್ರದುರ್ಗ: ಸಿಲಿಂಡರ್ ಸ್ಫೋಟಗೊಂಡು ಒಂದೇ ಕುಟುಂಬದ ಮೂವರು ಮೃತ್ಯು

ಚಿತ್ರದುರ್ಗ, ಜ. 2: ಇಲ್ಲಿನ ಗಾರೆಹಟ್ಟಿ ಬಡಾವಣೆಯ ಮನೆಯೊಂದರಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಮನೆಯಲಿದ್ದ ಮೂವರು ಮೃತಪಟ್ಟ ದಾರುಣ ಘಟನೆ ಇಂದು ಬೆಳಗ್ಗೆ ನಡೆದಿದೆ.

ಮೃತರನ್ನು ಅರುಣ್ (40), ಪತ್ನಿ ಲತಾ (35), ಹಾಗೂ 7ನೇ ತರಗತಿ ವಿದ್ಯಾರ್ಥಿನಿ ಪುತ್ರಿ ಅಮೃತಾ(13) ಎಂದು ಗುರುತಿಸಲಾಗಿದೆ.

ಸ್ಪೋಟದ ರಭಸಕ್ಕೆ ಮನೆಯಲ್ಲಿನ ವಸ್ತುಗಳೆಲ್ಲಾ ಸುಟ್ಟು ಕರಕಲಾಗಿವೆ. ಮೂರು ಜನರ ಮೃತ ದೇಹಗಳು‌ ಅರೆಬರೆ ಸುಟ್ಟಿವೆ. ಸ್ಥಳಕ್ಕೆ ಅಗ್ನಿಶಾಮಕ ದಳ ತೆರಳಿ ಬೆಂಕಿ‌ ನಂದಿಸುವ ಕಾರ್ಯದಲ್ಲಿ ತೊಡಗಿವೆ.

Also Read  "ಯೋಗ್ಯತೆ ಇಲ್ಲ ಅಂದ್ಮೇಲೆ ಸಮವಸ್ತ್ರ ಕಳಚಿಟ್ಟು ಸಾಯಲಿ..!" ➤ ಪೊಲೀಸರ ವಿರುದ್ದ ಕಿಡಿಕಾರಿದ ಸಚಿವ ಆರಗ ಜ್ಞಾನೇಂದ್ರ

ಚಿತ್ರದುರ್ಗ ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

error: Content is protected !!
Scroll to Top