ಸಿಎಂ ಬೆಂಗಾವಲು ವಾಹನ ಢಿಕ್ಕಿ: ನಾಲ್ವರಿಗೆ ಗಾಯ

ಬೆಂಗಳೂರು, ಜ.1: ಸಿಎಂ ಬಿ.ಎಸ್.ಯಡಿಯೂರಪ್ಪ ಬೆಂಗಾವಲು ವಾಹನ ಬೇರೆ ಎರಡು ವಾಹನಗಳಿಗೆ ಢಿಕ್ಕಿ ಹೊಡೆದ ಪರಿಣಾಮ ನಾಲ್ವರು ಗಾಯಗೊಂಡ ಘಟನೆ  ಬೆಂಗಳೂರಿನ ಯಶವಂತಪುರ ಮೇಲ್ಸೇತುವೆ ಬಳಿ ನಡೆದಿದೆ.

Nk Kukke

ತುಮಕೂರಿಗೆ ಪ್ರಧಾನಿ ಆಗಮಿಸಲಿರುವ ಹಿನ್ನಲೆಯಲ್ಲಿ ಭದ್ರತೆ ಪರಿಶೀಲನೆ ನಡೆಸಲು ಮುಖ್ಯಮಂತ್ರಿ ಯಡಿಯೂರಪ್ಪ ಹೊರಟಿದ್ದರು. ಯಶವಂತಪುರ ಮೇಲ್ಸೇತುವೆ ಬಳಿ ಬೆಳಗ್ಗೆ 11 ಗಂಟೆಗೆ ಹೋಗುತ್ತಿರಬೇಕಾದರೆ ಹಿಂದಿನಿಂದ ಬರುತ್ತಿದ್ದ ಬೆಂಗಾವಲು ಪಡೆ ಕಾರಿನ ಚಾಲಕ ವಿನಯ್ ಕುಮಾರ್ ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದಿದ್ದಾರೆನ್ನಲಾಗಿದೆ.

ಕಾರು ವಿಭಜಕಕ್ಕೆ ಹೊಡೆದು ನುಗ್ಗಿ ಎದುರಿನಿಂದ ಬರುತ್ತಿದ್ದ ಆಟೋ ರಿಕ್ಷಾ ಮತ್ತು ಕ್ಯಾಂಟರ್ ಗೆ ಡಿಕ್ಕಿ ಹೊಡೆಯಿತು. ಅಪಘಾತದಲ್ಲಿ ಕಾರು ಚಾಲಕ, ಆಟೋ ಚಾಲಕ ಮತ್ತು ಕ್ಯಾಂಟರ್ ಚಾಲಕರಿಗೆ ಗಾಯಗಳಾಗಿದೆ. ಕಾರಿನ ಮುಂದಿನ ಭಾಗ ಸಂಪೂರ್ಣ ಹಾನಿಯಾಗಿದೆ. ಈ ಘಟನೆ ನಡೆಯುವಾಗ ಸಿಎಂ ಅವರ ಕಾರ್ಯದರ್ಶಿ ಅವರ ಕಾರಿನಲ್ಲಿಯೇ ಇದ್ದರು. ವೇಗದ ಚಾಲನೆಯಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಯಶವಂತಪುರ ಸಂಚಾರಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

Also Read  ಉಡುಪಿ: ಊಟ ಮುಗಿಸಿ ಬರುತ್ತಿದ್ದ ಯುವಕ ಕುಸಿದು ಮೃತ್ಯು.!

error: Content is protected !!
Scroll to Top