ಉಡುಪಿ ನೂತನ ಎಸ್ಪಿಯಾಗಿ ಅಕ್ಷಯ್ ಮಚ್ಚೀಂದ್ರ

ಉಡುಪಿ, ಜ.1: ಉಡುಪಿಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಕ್ಷಯ್‌ ಮಚ್ಚೀಂದ್ರ ಹಾಕೆಯನ್ನು ನಿಯುಕ್ತಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಅವರು ಈ ಮೊದಲು ಕಲಬುರಗಿ ಜಿಲ್ಲೆಯ ಚಿಂಚೋಳಿ ಉಪವಿಭಾಗದ ಸಹಾಯಕ ಪೊಲೀಸ್‌ ಅಧೀಕ್ಷರರಾಗಿ ಸೇವೆ ಸಲ್ಲಿಸಿದರು.

ಎಸ್ಪಿಯಾಗಿದ್ದ ನಿಶಾ ಜೇಮ್ಸ್‌ ಅವರನ್ನು ಬೆಂಗಳೂರಿನ ಆಂತರಿಕ ಭದ್ರತಾ ವಿಭಾಗದ ಪೊಲೀಸ್‌ ಅಧೀಕ್ಷಕರಾಗಿ ವರ್ಗಾವಣೆ ಮಾಡಿ ಆದೇಶ ನೀಡಲಾಗಿದೆ. ನೂತನ ಎಸ್ಪಿಯವರು 2015ರ ಬ್ಯಾಂಚ್‌ನ ಐಪಿಎಸ್‌ ಅಧಿಕಾರಿಯಾಗಿದ್ದಾರೆ. ನಿಶಾ ಜೇಮ್ಸ್‌ ಅವರು 2018ರ ಫೆಬ್ರವರಿ 23ರಂದು ಉಡುಪಿ ಎಸ್ಪಿಯಾಗಿದ್ದು ಮಹಿಳೆಯರ ಸುರಕ್ಷತೆಯ ನಿಟ್ಟಿನಲ್ಲಿ ಅಬ್ಬಕ್ಕ ಪಡೆಯನ್ನು ರಚಿಸಿದ್ದಾರೆ.

Also Read  ಕೊೈಲ ಬರಮೇಲು ದೈವಗಳ ನೇಮೋತ್ಸವ

 

 

error: Content is protected !!
Scroll to Top