Big Breaking News ಪೇಜಾವರ ಶ್ರೀ ನಿಧನ

ಉಡುಪಿ, ಡಿ.29: ಇಲ್ಲಿನ ಅಷ್ಟಮಠಗಳಲ್ಲಿ ಒಂದಾದ ಪೇಜಾವರ ಮಠದ ಮುಖ್ಯಸ್ಥರಾದ ಶ್ರೀ ವಿಶ್ವೇಶ್ವ ತೀರ್ಥ ಸ್ವಾಮೀಜಿ (89) ನಿಧನರಾಗಿದ್ದಾರೆ.

ಡಿ.20ರಂದು ಮುಂಜಾನೆ 3 ಗಂಟೆ ಸುಮಾರಿಗೆ ಅವರ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡು ಉಸಿರಾಟದ ತೊಂದರೆಯುಂಟಾಗಿತ್ತು. ಕೂಡಲೇ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ನಂತರ ಅಂದೇ ಮುಂಜಾನೆ 5 ಸುಮಾರಿಗೆ ಪೇಜಾವರ ಶ್ರೀ ಅವರನ್ನು ಮಣಿಪಾಲ ಕೆಎಂಸಿಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾದರು. ಸತತ ಎಂಟು ದಿನಗಳಿಂದ ಅವರಿಗೆ ಚಿಕಿತ್ಸೆ ನೀಡಲಾಗಿತ್ತು.

ಸುಬ್ರಹ್ಮಣ್ಯದ ಸಮೀಪದ ಹಳ್ಳಿಯಾದ ರಾಮಕುಂಜದಲ್ಲಿ ನಾರಾಯಣಾಚಾರ್ಯ ಕಮಲಮ್ಮ ದಂಪತಿಗೆ ಎರಡನೆಯ ಗಂಡುಮಗುವಾಗಿ 1931ರಲ್ಲಿ ಏಪ್ರಿಲ್ 27ರಂದು ಜನಿಸಿದರು. ಶ್ರೀಗಳ ಪೂರ್ವಾಶ್ರಮದ ಹೆಸರು ‘ವೆಂಕಟರಮಣ’. ಏಳರ ಬಾಲ್ಯದ ಅಧೋಕ್ಷಜ ತೀರ್ಥರ ಸಂಸ್ಥಾನದ ಉತ್ತರಾಧಿಕಾರಿಯಾಗಿ, ಪೇಜಾವರ ಮಠದ ಪರಂಪರೆಯ 32ನೆಯ ಯತಿಯಾಗಿ, 1938ರ ಡಿ.3ರಂದು ಆಚಾರ್ಯ ಮಧ್ವರ ವೇದಾಂತ ಪೀಠವನ್ನೇರಿದರು. ಆ ಬಳಿಕ ವೆಂಕಟರಾಮ ‘ವಿಶ್ವೇಶ ತೀರ್ಥ’ರಾದರು. 1952 ಜನವರಿ 18 ರಂದು, 21ರ ಹರೆಯದಲ್ಲಿ ಮೊದಲ ಪರ್ಯಾಯ ಪೀಠಾರೋಹಣ ಮಾಡಿದರು.

error: Content is protected !!
Scroll to Top