ಮಂಗಳೂರಿಗೆ ಬಂದಿಳಿದ ಪ.ಬಂಗಾಳ ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕರ ತಂಡ

  • ಗೋಲಿಬಾರ್‌ನಲ್ಲಿ ಮೃತಪಟ್ಟ ಕುಟುಂಬಕ್ಕೆ ಸಾಂತ್ವನ

ಮಂಗಳೂರು, ಡಿ.28: ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಪಕ್ಷದ ಇಬ್ಬರು ಪ್ರಮುಖ ನಾಯಕರ ತಂಡ ಶನಿವಾರ ಮಂಗಳೂರಿಗೆ ಆಗಮಿಸಿದೆ.
ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ನಿರ್ದೇಶನದಂತೆ, ರಾಜ್ಯಸಭಾ ಸದಸ್ಯ ನದೀಮುಲ್ ಹಖ್ ಮತ್ತು ಕೇಂದ್ರ ರೈಲ್ವೇ ಖಾತೆ ಮಾಜಿ ಸಚಿವ ದಿನೇಶ್ ತ್ರಿವೇದಿ ಡಿ.19ರಂದು ಗೋಲಿಬಾರ್‌ನಲ್ಲಿ ಮೃತಪಟ್ಟಿರುವ ಅಬ್ದುಲ್ ಜಲೀಲ್ ಕಂದುಕ ಮತ್ತು ನೌಶೀರ್ ಕುದ್ರೋಳಿ ಅವರ ಮನೆಗೆ ಭೇಟಿ ನೀಡಿದರು.

ಮೃತರ ಕುಟುಂಬದ ಜತೆ ಮಾಹಿತಿ ಪಡೆದು, ಇಲ್ಲಿಯ ಆಡಳಿತ ವ್ಯವಸ್ಥೆ ನಿಮ್ಮ ಜತೆ ಇಲ್ಲದಿದ್ದರೂ, ದೀದಿ ಮಮತಾ ಬ್ಯಾನರ್ಜಿ ನಿಮ್ಮ ಜತೆ ಇದ್ದಾರೆ. ಇಡೀ ಭಾರತ ಈ ಆಂದೋಲನದಲ್ಲಿದೆ. ನಿಮ್ಮ ನೋವಿನ‌ ಜೊತೆ‌ ನಾವಿದ್ದೇನೆ. ಯಾವುದೇ ಕಾರಣಕ್ಕೂ ಧೃತಿಗೆಡಬೇಡಿ. ದೀದಿಯ ಸಾಂತ್ವನ ಹೇಳಲು ನಾವಿಲ್ಲಿಗೆ ಬಂದಿದ್ದೇವೆ ಎಂದು ಸಮಾಧಾನ ಹೇಳಿದರು.

Also Read    ಟರ್ಕಿ-ಸಿರಿಯಾದಲ್ಲಿ ಭೀಕರ ಭೂಕಂಪ ದುರಂತ ➤ ಮೃತಪಟ್ಟವರ ಸಂಖ್ಯೆ 21 ಸಾವಿರಕ್ಕೆ ಏರಿಕೆ

ಇದೇ ಸಂದರ್ಭ ಮಮತಾ ಬ್ಯಾನರ್ಜಿಯವರು ಮೃತರ ಕುಟುಂಬಸ್ಥರಿಗೆ ಘೋಷಿಸಿದ 5 ಲಕ್ಷ ರೂ. ಚೆಕ್ಕನ್ನು ವಿತರಿಸಿದರು.

error: Content is protected !!
Scroll to Top