ಆತೂರು ರೇಂಜ್ ಆಶ್ರಯದಲ್ಲಿ ಪ್ರಚಾರ ಸಮಾವೇಶ

(ನ್ಯೂಸ್ ಕಡಬ) newskadaba.com, ಕಡಬ, ಡಿ.28   ಆತೂರು ರೇಂಜ್ ಜಂ – ಇಯ್ಯತುಲ್ ,ಮುಅಲ್ಲಿಮೀನ್ ಹಾಗೂ ಮದ್ರಸ ಮ್ಯಾನೇಜ್ ಮೆಂಟ್ ಅಸೋಸಿಯೇಷನ್ ಮತ್ತು ಎಸ್.ಕೆ.ಎಸ್.ಬಿ.ವಿ ಆತೂರು ರೇಂಜ್ ಜಂಟಿ ಆಶ್ರಯದಲ್ಲಿ ಸಮಸ್ತ ಕೇರಳ ಜಂ-ಇಯ್ಯತುಲ್ ಮುಅಲ್ಲಿಮೀನ್ ಸೆಂಟ್ರಲ್ ಕೌನ್ಸಿಲ್ ಇದರ 60ನೇ ವಾರ್ಷಿಕೋತ್ಸವದ ಪ್ರಚಾರ ಪ್ರಯುಕ್ತ ರೇಂಜ್ ಗೆ ಒಳಪಟ್ಟ ಎಲ್ಲಾ ಮದರಸಗಳ ವ್ಯಾಪ್ತಿಯಲ್ಲಿ ಸಮ್ಮೇಳನ ಪ್ರಚಾರ ಸಮಾವೇಶ, ವಾಹನ ಸಂದೇಶ ಯಾತ್ರೆ ಹಾಗೂ ಸಮಾರೋಪ ಕಾರ್ಯಕ್ರಮ ಬದ್ರಿಯಾ ಹಾಲ್ ಆತೂರಿನಲ್ಲಿ ಆತೂರು ಮದ್ರಸ ಮೇನೇಜ್ಮೆಂಟ್ ಅಧ್ಯಕ್ಷ ಅಬ್ದುಲ್ ರಝಾಕ್ ಬಿ. ಕೆ ಆತೂರು ಅಧ್ಯಕ್ಷತೆಯಲ್ಲಿ ನಡೆಯಿತು.

ಆತೂರು ಬದ್ರಿಯಾ ಜುಮಾ ಮಸೀದಿ ಮುದರ್ರಿಸ್ ಸಯ್ಯಿದ್ ಮುಹಮ್ಮದ್ ಜುನೈದ್ ಜಿಫ್ರೀ ತಂಙಳರ ಪ್ರಾರ್ಥನೆಗೆ ಚಾಲನೆ ನಿಡಿದರು. ಆತೂರು ರೇಂಜ್ ಜಂ – ಇಯ್ಯತುಲ್ ಮುಅಲ್ಲಿಮೀನ್ ಪ್ರಧಾನ ಕಾರ್ಯದರ್ಶಿ ಕೆ ಎಂ ಸಿದ್ದೀಖ್ ಫೈಝಿ ಕರಾಯ ಸ್ವಾಗತಿಸಿದರು. ಆತೂರು ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಗೌರವಾನ್ವಿತ ಅಧ್ಯಕ್ಷರಾದ ಸಯ್ಯಿದ್ ಅನಸ್ ತಂಙಳ್ ಗಂಡಿಬಾಗಿಲು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮೌಲಾನಾ ಇಸ್ಹಾಕ್ ಫೈಝಿ ಪಡ್ಡಂದಡ್ಕ ಮುಖ್ಯ ಫ್ರಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಗಳಾಗಿ ಸಮಸ್ತ ಮುಫತ್ತಿಷ್ ಕಾಸಿಂ ಮುಸ್ಲಿಯಾರ್, ಮುಹಮ್ಮದ್ ಹನೀಫ್ ದಾರಿಮಿ ಹಳೆನೇರಂಕಿ, ಹಸೈನಾರ್ ಹಾಜಿ ಗಂಡಿಬಾಗಿಲು, ಸಿರಾಜ್ ಬಡ್ಡಮೆ, ಹೈದೆರ್ ಕಲಾಯಿ, ಫಳುಲುದ್ದೀನ್ ಹೇಂತಾರ್, ಪೊಡಿಕುಂಞಿನೀರಾಜೆ , ಬಿ.ಅರ್.ಅಬ್ದುಲ್ ಖಾದರ್ , ಯೂಸುಫ್ ನೀರಾಜೆ, ಅಬ್ದುಲ್ ರಹೀಮಾನ್ ಮರುವೇಲ್, ಪುತ್ತುಮೋನು ಕೂಂಡಾಜೆ, ಝಕರಿಯಾ ಮುಸ್ಲಿಯಾರ್ ಆತೂರು, ಅಶ್ರಫ್ ಕೆ.ವೈ ಕುದ್ಲೂರು, ಅಬ್ಬಾಸ್ ಆತೂರು ಬೈಲು, ಸುಲೈಮಾನ್ ಬೈಲಂಗಡಿ, ನಝೀರ್ ಕೊಯಿಲಾ, ಜಿಲ್ಲಾ ಕೌನ್ಸಿಲರಾದ ಸಿದ್ಧೀಖ್ ನೀರಾಜೆ ಉಪಸ್ಥಿತರಿದ್ದರು. ಮಧ್ಯಾಹ್ನ 2 ಗಂಟೆಗೆ ಶೈಖುನಾ ಶಾಹ್ ಉಸ್ತಾದರ ಕಬರ್ ಝಿಯಾರತ್ ನೊಂದಿಗೆ ಗಂಡಿಬಾಗಿಲು ನಿಂದ ಉದ್ಘಾಟನೆ ಗೊಂಡ ಪ್ರಚಾರ ಸಮಾವೇಶ ಆತೂರಿನಲ್ಲಿ ಸಮಾಪನಗೊಂಡಿತ್ತು. ಸಯ್ಯಿದ್ ಅನಸ್ ತಂಙಳ್ ಗಂಡಿಬಾಗಿಲು ಪ್ರಚಾರ ವಾಹನ ಸಂದೇಶ ಯಾತ್ರೆವನ್ನು ಉದ್ಘಾಟಿಸಿದರು. ಕೆ.ಎಚ್.ಫಾಝಿಲ್ ಹನೀಫಿ ಕೊಯಿಲ, ಇಬ್ರಾಹಿಂ ಫೈಝಿ ಪೆರಿಯಡ್ಕ, ಮುನೀರ್ ಅನ್ವರಿ ಕುಂಡಾಜೆ, ಅಬ್ದುಲ್ ಸಮದ್ ಅನ್ಸಾರಿ ಆತೂರು, ಸಿ.ಯಂ.ಇಬ್ರಾಹಿಂ ಕೌಸರಿ ಆತೂರುಬೈಲು, ಅಬ್ದುಲ್ ರಝಾಕ್ ದಾರಿಮಿ ನೀರಾಜೆ, ಬದ್ರುದ್ದೀನ್ ಮುಸ್ಲಿಯಾರ್ ಮೂಸಾ ಮುಸ್ಲಿಯಾರ್ ಗಂಡಿಬಾಗಿಲು, ಅಶ್ರಫ್ ರಹ್ ಮಾನಿ ಕುದ್ಲೂರು, ಹಂಝ ಸಖಾಫಿ ಆತೂರು, ಅಬ್ದುಲ್ ರಜಾಕ್ ದಾರಿಮಿ ಹಳೆನೇರಂಕಿ ಸಂದೇಶ ಭಾಷಣ ಮಾಡಿದರು. ಸಮಾರೋಪ ಕಾರ್ಯಕ್ರಮ ಬದ್ರಿಯಾ ಹಾಲ್ ಆತೂರಿನಲ್ಲಿ ನಡೆಯಿತು. ಜಾಥಾದಲ್ಲಿ ರೇಂಜ್ ಹಾಗೂ ಮದರಸ ಮ್ಯಾನೇಜ್ ಮೆಂಟ್ ಪ್ರತಿನಿಧಿಗಳು, ಜಮಾಅತ್ತ್ ಮೊಹಲ್ಲಾ ನಾಯಕರು, ಎಸ್.ಕೆ.ಎಸ್.ಎಸ್.ಎಫ್ ಕಾರ್ಯಕರ್ತರು, ಎಸ್.ಕೆ.ಎಸ್.ಬಿ.ವಿ ವಿಧ್ಯಾರ್ಥಿಗಳು ಭಾಗವಹಿಸಿದ್ದರು.

Also Read  ಕಲಾಯಿ ಅಶ್ರಫ್ ಕೊಲೆ ಪ್ರಕರಣ: ಐವರ ಬಂಧನ

error: Content is protected !!
Scroll to Top