ಕಡಬ: ಮನೆಗೆ ನುಗ್ಗಿ ಕಳ್ಳತನ ➤ ಚಿನ್ನಾಭರಣ ಕಳ್ಳರ ಪಾಲು

(ನ್ಯೂಸ್ ಕಡಬ) newskadaba.com ಕಡಬ, ಡಿ.28. ಠಾಣಾ ವ್ಯಾಪ್ತಿಯ ಐತ್ತೂರು ಗ್ರಾಮದ ಕೋಡಂದೂರು ಎಂಬಲ್ಲಿನ ಮನೆಯೊಂದಕ್ಕೆ ಶುಕ್ರವಾರ ಹಾಡುಹಗಲೇ ಒಳ ನುಗ್ಗಿರುವ ಕಳ್ಳರು ಮನೆಯೊಳಗಿಟ್ಟಿದ್ದ 16 ಗ್ರಾಂ ಚಿನ್ನಾಭರಣವನ್ನು ಕದ್ದೊಯ್ದಿದ್ದಾರೆ‌.

ಕೋಡಂದೂರು ನಿವಾಸಿ ಕಮಲ ಎಂಬವರ ಮನೆಗೆ ನುಗ್ಗಿದ ಕಳ್ಳರು ಮನೆಯೊಳಗಿದ್ದ ಕಪಾಟನ್ನು ಜಾಲಾಡಿದ್ದಲ್ಲದೆ 16 ಗ್ರಾಂ ಚಿನ್ನದ ಸರವನ್ನು ಕದ್ದೊಯ್ದಿದ್ದಾರೆ. ಮನೆಯ ಬೀಗದ ಕೀಯನ್ನು ಹೊರಗಡೆ ಇಟ್ಟು ಕೂಲಿ ಕೆಲಸಕ್ಕೆ ತೆರಳಿದ್ದ ಕಮಲರವರು ಸಂಜೆ ಮನೆಗೆ ಹಿಂತಿರುಗಿದಾಗ ಬೀಗ ತೆರೆದು ಕಳ್ಳತನ ನಡೆಸಿರುವುದು ಬೆಳಕಿಗೆ ಬಂದಿದೆ. ಸ್ಥಳೀಯರೇ ಕಳ್ಳತನ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಕಡಬ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Also Read  ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್ ದರ ಹೆಚ್ಚಳಕ್ಕೆ ಸರ್ಕಾರ ಅಸ್ತು

Nk Kukke

error: Content is protected !!
Scroll to Top