ಕಜಕಿಸ್ಥಾನ, ಡಿ.27: 95 ಮಂದಿ ಪ್ರಯಾಣಿಕರು ಮತ್ತು ಐವರು ಸಿಬ್ಬಂದಿಗಳಿದ್ದ ವಿಮಾನವೊಂದು ಪತನಗೊಂಡು ಕನಿಷ್ಠ ಒಂಬತ್ತು ಮಂದಿ ಮೃತಪಟ್ಟ ಘಟನೆ ಕಜಕಿಸ್ಥಾನದಲ್ಲಿ ಶುಕ್ರವಾರ ನಡೆದಿದೆ.
ವಿಮಾನವು ಕಜಕಿಸ್ಥಾನದ ರಾಜಧಾನಿ ನೂರ್ ಸುಲ್ತಾನ್ ಗೆ ಹೊರಟಿದ್ದು ಅಲ್ಮಾಟಿ ವಿಮಾನ ನಿಲ್ದಾಣದ ಸಮೀಪ ಈ ದುರ್ಘಟನೆ ನಡೆದಿದೆ.
ವಿಮಾಣ ಟೇಕ್ ಆಫ್ ಆಗುವ ಸಂದರ್ಭದಲ್ಲಿ ಕಟ್ಟಡಕ್ಕೆ ಡಿಕ್ಕಿ ಹೊಡೆದ ಪರಿಣಾಮದಿಂದಾಗಿ ಪತನವಾಗಿದೆ. ಟೇಕ್ ಆಫ್ ಆದ ಸಂದರ್ಭದಲ್ಲಿ ವಿಮಾನದ ಸಂಪರ್ಕವು ಕಡಿತವಾಗಿದೆ ಎಂದು ತಿಳಿದು ಬಂದಿದೆ.
ಈವಿಮಾನವು ಕಜಕ್ ಕ್ಯಾರಿಯರ್ ಬೆಕ್ ಏರ್ ನಿರ್ವಹಿಸುವ ಫ್ಲೀಟ್ ಫೋಕರ್ 100 ಸರಣಿಗೆ ಸೇರಿದ್ದು ಪತನ ನಡೆದ ಹಿನ್ನಲೆಯಲ್ಲಿ ಕೂಡಲೇ ಈ ಮಾದರಿಯ ಎಲ್ಲಾ ವಿಮಾನಗಳ ಹಾರಾಟವನ್ನು ಸ್ಥಗಿತ ಮಾಡುವಂತೆ ಸಂಸ್ಥೆ ಆದೇಶ ಹೊರಡಿಸಿದೆ.
ಕಜಕಿಸ್ಥಾನದ ಅಧ್ಯಕ್ಷ ಕಸ್ಯಾಮ್ ಜೋಮಾರ್ಟ್ ಟೋಕಾಯೆವ್ ಈ ಕುರಿತು ಮಾತನಾಡಿ, “ಈ ಅವಘಡಕ್ಕೆ ಕಾರಣ ಯಾರೇ ಆದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.