ಕಲಬುರಗಿ, ಡಿ.26: ಗ್ರಹಣದ ಹಿನ್ನೆಲೆಯಲ್ಲಿ ಪೋಷಕರು ವಿಕಲಾಂಗ ಮಕ್ಕಳನ್ನು ತಿಪ್ಪೆಯಲ್ಲಿ ಹೂತಿಟ್ಟ ಘಟನೆಗಳು ಕಲಬುರಗಿಯಲ್ಲಿ ನಡೆದಿವೆ.
ಕಲಬುರಗಿ ತಾಲೂಕಿನ ತಾಜ್ ಸುಲ್ತಾನ್ ಪುರ ಗ್ರಾಮದಲ್ಲಿ ಮೂವರು ಮಕ್ಕಳು ಹಾಗೂ ಚಿಂಚೋಳಿ ತಾಲೂಕಿನ ಐನೋಳ್ಳಿ ಗ್ರಾಮದಲ್ಲಿ ಸುಮಾರು ನಾಲ್ವರು ಮಕ್ಕಳನ್ನು ಮೂಢನಂಬಿಕೆಯಿಂದ ಕುತ್ತಿಗೆ ಮಟ್ಟ ಹೂತಿಡಲಾಗಿತ್ತು. ಗ್ರಹಣ ಸಮಯದಲ್ಲಿ ತಿಪ್ಪೆ ಮತ್ತು ಮಣ್ಣನಲ್ಲಿ ಹೂತಿಟ್ಟರೆ ಅಂಗವೈಕಲ್ಯ ಸರಿಯಾಗುತ್ತದೆ ಎಂಬ ಮೂಢನಂಬಿಕೆ ಜನರಲ್ಲಿ ಇದೆ. ಹೀಗಾಗಿ ಚಿಕ್ಕ-ಚಿಕ್ಕ ಮಕ್ಕಳನ್ನು ಪೋಷಕರು ಹೂತಿಟ್ಟಿದ್ದರು.