ಮಂಗಳೂರಿನಲ್ಲಿ ಸಂಭ್ರಮದ ಕ್ರಿಸ್ಮಸ್ ಆಚರಣೆ

ಮಂಗಳೂರು, ಡಿ.25: ಯೇಸು ಕ್ರಿಸ್ತರ ಜನನದ ಹಬ್ಬದ ಮುನ್ನಾ ದಿನವಾದ ಮಂಗಳವಾರ ಕ್ರೈಸ್ತರು ಕ್ರಿಸ್ಮಸ್‌ ಜಾಗರಣೆಯ ರಾತ್ರಿಯನ್ನು ಆಚರಿಸಿದರು. ಚರ್ಚ್‌ಗಳನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿತ್ತು. ಚರ್ಚ್‌ ಆವರಣದಲ್ಲಿ ಮತ್ತು ಕ್ರೈಸ್ತರ ಮನೆ ಆವರಣದಲ್ಲಿ ಆಕರ್ಷಕ ನಕ್ಷತ್ರಗಳನ್ನು ಜೋಡಿಸಲಾಗಿತ್ತು.

ಚರ್ಚ್‌ಗಳಲ್ಲಿ ರಾತ್ರಿ ವೇಳೆ ಜರುಗಿದ ವಿಶೇಷ ಪ್ರಾರ್ಥನೆಗಳಲ್ಲಿ ಕ್ರೈಸ್ತರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಕ್ರಿಸ್ಮಸ್‌ ಕ್ಯಾರೊಲ್‌ಗಳನ್ನು ಹಾಡಿ ಯೇಸು ಕ್ರಿಸ್ತರ ಜನನವನ್ನು ಸ್ಮರಿಸಿ ಕಂದ ಯೇಸುವಿಗೆ ನಮಿಸಿದರು.

ಮಂಗಳೂರಿನ ರೊಸಾರಿಯ ಕೆಥೆಡ್ರಲ್‌ನಲ್ಲಿ ರಾತ್ರಿ ನಡೆದ ಸಂಭ್ರಮದ ಬಲಿ ಪೂಜೆಯಲ್ಲಿ ಬಿಷಪ್‌ ರೆ. ಡಾ. ಪೀಟರ್‌ ಪಾವ್ಲ್ ಸಲ್ಡಾನ್ಹಾ, ಉಡುಪಿ ಕಲ್ಯಾಣಪುರ ಕೆಥೆಡ್ರಲ್‌ನಲ್ಲಿ ಬಿಷಪ್‌ ರೆ.ಡಾ.ಜೆರಾಲ್ಡ್‌ ಐಸಾಕ್‌ ಲೋಬೋ ಅವರು ನೇತೃತ್ವ ವಹಿಸಿ ಹಬ್ಬದ ಸಂದೇಶ ನೀಡಿದರು. ಕೆಥೆಡ್ರಲ್‌ನ ರೆಕ್ಟರ್‌ ರೆ.ಜೆ.ಬಿ. ಕ್ರಾಸ್ತಾ, ರೆ. ಲಾರೆನ್ಸ್‌ ಡಿಸೋಜಾ ಮತ್ತಿತರ ಗುರುಗಳು ಉಪಸ್ಥಿತರಿದ್ದರು.

Also Read  ಮಂಗಳೂರು: ಮಟ್ಕ ಚೀಟಿ ದಂಧೆ !!! ➤ ಮೂವರು ಆರೋಪಿಗಳು ಅರೆಸ್ಟ್

 

ಪಾಪದ ಕೂಪಕ್ಕೆ ಬಿದ್ದಿರುವ ಮನುಕುಲವನ್ನು ರಕ್ಷಿಸಲು, ಈ ಪ್ರಕೃತಿಯನ್ನು ಪುನ‌ಶ್ಚೇತನಗೊಳಿಸಲು ದೇವರು ಯೇಸು ಕ್ರಿಸ್ತರನ್ನು ಈ ಭೂಮಿಗೆ ಕಳುಹಿಸಿದರು. ದೇವರ ಪುತ್ರರಾಗಿ ಯೇಸು ಕಂದನಿಗೆ ನಮ್ಮ ಹೃನ್ಮನಗಳಲ್ಲಿ ನೆಲೆಸಲು ಅವಕಾಶ ಕೊಡೋಣ ಎಂದರು.

error: Content is protected !!
Scroll to Top