ಪ್ರೆಸ್ ಕ್ಲಬ್ ವರ್ಷದ ವ್ಯಕ್ತಿ ಪ್ರಶಸ್ತಿಗೆ ಡಾ.ವೀರೇಂದ್ರ ಹೆಗ್ಗಡೆ ಆಯ್ಕೆ

ಬೆಂಗಳೂರು, ಡಿ.25: ಪ್ರತಿಷ್ಠಿತ ಬೆಂಗಳೂರು ಪ್ರೆಸ್ ಕ್ಲಬ್ ವರ್ಷದ ವ್ಯಕ್ತಿ ಪ್ರಶಸ್ತಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರನ್ನು ಆಯ್ಕೆ ಮಾಡಲಾಗಿದೆ.

ಅಲ್ಲದೆ ಯುಗದ ಸಾಧಕ ಪ್ರಶಸ್ತಿಗೆ ಪ್ರೊ.ಜಿ.ವೆಂಕಟಸುಬ್ಬಯ್ಯ, 2019 ನೇ ಸಾಲಿನ ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿಗಳಿಗೆ ಎಂ.ಸಿದ್ದರಾಜು, ಕೆ.ಸುನೀಲ್ ಪ್ರಸಾದ್, ಕೆ.ಎಚ್.ಸಾವಿತ್ರಿ, ಬಿ.ವಿ.ನಾಗರಾಜು, ರವೀಂದ್ರ ಜಿ. ಭಟ್, ಕೆ.ಎನ್.ಚೆನ್ನೇಗೌಡ, ಬಿ.ಹರಿಶ್ಚಂದ್ರ ಭಟ್, ಎಂ.ಅಬ್ದುಲ್ ಹಮೀದ್, ಇಮ್ರಾನ್ ಖುರೇಶಿ, ಜಿ.ಕೆ.ಸತ್ಯ, ಲಕ್ಷ್ಮಣ ಕೊಡಸೆ, ಜೋಸೆಫ್ ಹೂವರ್, ಎನ್.ಎಸ್.ಶಂಕರ್, ಬಿ.ಕೆ.ರವಿ, ರು.ಬಸಪ್ಪ ಹಾಗೂ ಜಯಪ್ರಕಾಶ್ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ.

Also Read  ಪ್ರಿ ವೆಡ್ಡಿಂಗ್ ಫೋಟೋಶೂಟ್ ವೇಳೆ ನೀರುಪಾಲಾದ ನವ ಜೋಡಿ.!

ಪ್ರಶಸ್ತಿ ಪ್ರದಾನ ಸಮಾರಂಭ ಇದೇ ತಿಂಗಳ 31 ರಂದು ನಡೆಯಲಿದ್ದು, ಮುಖ್ಯಮಂತ್ರಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

error: Content is protected !!
Scroll to Top