ಗುಂಡೇಟಿಗೆ ಬಲಿಯಾದ ಜಲೀಲ್ ರ ಮಕ್ಕಳನ್ನು ಸಅದಿಯ್ಯದಿಂದ ದತ್ತು: ಬೇಕಲ್ ಉಸ್ತಾದ್

ಮಂಗಳೂರು, ಡಿ.22: ಪೊಲೀಸ್ ಗುಂಡೇಟಿಗೆ ಬಲಿಯಾದ ಕಂದಕ್ ನಿವಾಸಿ ಅಬ್ದುಲ್ ಜಲೀಲ್ ರ  ಎರಡು ಮಕ್ಕಳನ್ನು ಕಾಸರಗೋಡಿನ ಜಾಮಿಅ ಸಅದಿಯ್ಯ ಅರಬಿಯ್ಯ ದತ್ತು ಪಡೆದಿದೆ ಎಂದು ಪ್ರಾಂಶುಪಾಲ, ಖಾಝಿ ಬೇಕಲ ಇಬ್ರಾಹೀಂ ಮುಸ್ಲಿಯಾರ್ ತಿಳಿಸಿದ್ದಾರೆ.

Nk Kukke

ಅವರು ಮೃತರ ಮನೆಗೆ ಭೇಟಿ ನೀಡಿದ ಸಂದರ್ಭ ದತ್ತು ಪಡೆದ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭ ಸುನ್ನೀ ಕೋ ಆರ್ಡಿನೇಶನ್ ಸಮಿತಿಯ ಅಧ್ಯಕ್ಷ ಎಸ್.ಪಿ. ಹಂಝ ಸಖಾಫಿ ಬಂಟ್ವಾಳ, ಕಾರ್ಯದರ್ಶಿ ಅಶ್ರಫ್ ಕಿನಾರ, ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಹಾಫಿಳ್ ಯಾಕೂಬ್ ಸಅದಿ ನಾವೂರು ಮತ್ತಿತರರು ಉಪಸ್ಥಿತರಿದ್ದರು. ನಂತರ ಮತ್ತೋರ್ವ ಗುಂಡೇಟಿಗೆ ಬಲಿಯಾದ ನೌಶೀನ್ ರವರ ಮನೆಗೂ ಭೇಟಿ ಸಾಂತ್ವನ ಹೇಳಿದರು.

Also Read  ನಿಲ್ಲಿಸಿದ್ದ ಲಾರಿಗೆ ಆಟೋ ರಿಕ್ಷಾ ಢಿಕ್ಕಿ- ಚಾಲಕನಿಗೆ ಗಾಯ

error: Content is protected !!
Scroll to Top