ಸಹಜ ಸ್ಥಿತಿಯತ್ತ ಮಂಗಳೂರು

ಮಂಗಳೂರು, ಡಿ22: ನಗರದಲ್ಲಿ ಡಿ.19ರಿಂದ ವಿಧಿಸಲಾದ ಕಫ್ಯೂ೯ನಿಂದ ಅಸ್ತವ್ಯಸ್ತಗೊಂಡ ಜನಜೀವನ ಇಂದು ಅಲ್ಪಮಟ್ಟಿಗೆ ಸುಧಾರಿಸಿದೆ.

ನಗರದಾದ್ಯಂತ ಅಂಗಡಿ ಮುಂಗಟ್ಟುಗಳು ತೆರೆಯಲ್ಪಟ್ಟಿವೆ. ಸಿಟಿ ಸಹಿತ ಸರಕಾರಿ ಬಸ್ ಸಂಚಾರ ಆರಂಭವಾಗಿದೆ. ಬಿಕೋ‌ ಎನ್ನುತ್ತಿದ್ದ ರಸ್ತೆಗಳಲ್ಲಿ‌ ವಾಹನ ಸಂಚಾರ, ಜನ ಸಂಚಾರ ಮತ್ತೆ ಪ್ರಾರಂಭವಾಗಿದೆ.  ಹಾಲು, ಆಹಾರ ಸಹಿತ ಅಗತ್ಯ ವಸ್ತುಗಳನ್ನು ಖರೀದಿಸಲು ಜನರು  ಮುಗಿಬಿದ್ದಿದ್ದರು.  ಪೆಟ್ರೋಲ್ ಬಂಕ್ ಮುಂದೆ ಇಂಧನ ತುಂಬಿಸಲು ಸಾಲುಗಟ್ಟಿ ನಿಂತ ವಾಹನಿಗರ ದಂಡೆ ಇದ್ದವು.

Also Read  ಮಂಗಳೂರು: ಲಾರಿ ಹರಿದು ಮಲಗಿದ ವ್ಯಕ್ತಿ ಮೃತ್ಯು

error: Content is protected !!
Scroll to Top