ಮಂಗಳೂರು: ಕರ್ಫ್ಯೂ ಉಲ್ಲಂಘಿಸಿ ಸಿಪಿಐನಿಂದ ಪ್ರತಿಭಟನೆ

ಮಂಗಳೂರು, ಡಿ.21: ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಮಂಗಳೂರಿನಲ್ಲಿ ಗುರುವಾರ ನಡೆದ ಹಿಂಸಾಚಾರವನ್ನು ಖಂಡಿಸಿ ಸಿಪಿಐ ಮುಖಂಡರು ಕರ್ಫ್ಯೂ ಉಲ್ಲಂಘಿಸಿ ನಗರದಲ್ಲಿಂದು ಪ್ರತಿಭಟನೆ ನಡೆಸಿದರು. ಈ ಸಂದರ್ಭ ಅವರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ನಡೆಯಿತು.

ಮಹಾನಗರ ಪಾಲಿಕೆಯ ಗಾಂಧಿ ಪ್ರತಿಮೆಯ ಮುಂದೆ ಸ್ವಾತಂತ್ಯ ಹೋರಾಟಗಾರ ಭಗತ್ ಸಿಂಗ್, ಸಂವಿಧಾನ ಶಿಲ್ಪಿ ಅಂಬೇಡ್ಕರ್, ರಾಷ್ಟ್ರಪಿತ ಮಹಾತ್ಮ ಗಾಂದಿ ಛಾಯಾಚಿತ್ರಗಳನ್ನು ಹಿಡಿದ ಪ್ರತಿಭಟನಾಕಾರರು ಯಡಿಯೂರಪ್ಪ ಗೋ ಬ್ಯಾಕ್, ಸಂವಿಧಾನ ವಿರೋಧಿಗಳಿಗೆ ದಿಕ್ಕಾರ, ಸೇವ್ ಇಂಡಿಯಾ, ಸೇವ್ ಡೆಮೂಕ್ರಸಿ, ಇಂಕಿಲಾಬ್ ಝಿಂದಾಬಾದ್ ಎಂದು ಘೋಷಣೆ ಕೂಗಿದರು. ಪ್ರತಿಭಟನೆಯಲ್ಲಿ ರಾಜ್ಯ ಸಭಾ ಸದಸ್ಯ ಬಿನೊಯ್ ವಿಶ್ವಂ, ಜ್ಯೋತಿ ಕೆ, ಜ್ಯೋತಿ ಎ, ಜನಾರ್ದನ್ ಕೆ.ಎಸ್.ಸಂತೋಷ್, ಎಚ್.ಎಂ.ಸಾತಿ ಸುಂದರೇಶ್‌ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.

Also Read  ವಿಧಾನಪರಿಷತ್ ಉಪ ಚುನಾವಣೆ ನಿಷೇಧಾಜ್ಞೆ ಜಾರಿಗೊಳಿಸುವಂತೆ ಜಿಲ್ಲಾಧಿಕಾರಿ ಆದೇಶ

error: Content is protected !!
Scroll to Top