ಕಲ್ಲಡ್ಕ ಪ್ರಭಾಕರ ಭಟ್ ಶಾಲೆಯಲ್ಲಿ ಬಾಬರಿ ಮಸೀದಿ ಧ್ವಂಸ ಮರುಸೃಷ್ಟಿ: ವಿವಾದ

ಕಲ್ಲಡ್ಕ, ಡಿ.17: ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಒಡೆತದನ ಖಾಸಗಿ ಶಾಲೆಯಲ್ಲಿ ನಡೆದ ವಾರ್ಷಿಕ ಕ್ರೀಡೋತ್ಸವದಲ್ಲಿ ಬಾಬರಿ ಮಸೀದಿ ಧ್ವಂಸ ಘಟನೆಯನ್ನು ವಿದ್ಯಾರ್ಥಿಗಳಿಂದ ಮರುಸೃಷ್ಟಿ ಮಾಡಲಾಗಿದ್ದು, ಇದೀಗ ವಿವಾದಕ್ಕೆ ಕಾರಣವಾಗಿದೆ.

ಡಿ.15ರಂದು ಶ್ರೀರಾಮ ವಿದ್ಯಾ ಕೇಂದ್ರ ಶಾಲೆಯಲ್ಲಿ ನಡೆದ ವಾರ್ಷಿಕ ಕ್ರೀಡೋತ್ಸವ ಕಾರ್ಯಕ್ರಮದಲ್ಲಿ ಮಕ್ಕಳು ಬಾಬರಿ ಮಸೀದಿ ಧ್ವಂಸ ಘಟನೆ ಮರುಸೃಷ್ಟಿಸಿ ಅಭಿನಿಯಿಸಿದ್ಧಾರೆ. ಈ ಮಕ್ಕಳು ಅಭಿನಯಿಸಿದ ಕಾರ್ಯಕ್ರಮಕದಲ್ಲಿ ಕೇಂದ್ರ ಸಚಿವ ಸದಾನಂದ ಗೌಡ ಮತ್ತು ಪಾಂಡಿಚೇರಿ ಲೆಫ್ಟೆನೆಂಟ್​​ ಗವರ್ನರ್​​​ ಕಿರಣ್​​ ಬೇಡಿ ಅಥಿತಿಗಳಾಗಿ ಭಾಗಿಯಾಗಿದ್ದರು.

Also Read  ನೆಲ್ಯಾಡಿ: ಉ.ಪ್ರ. ಮೂಲದ ಕೂಲಿ ಕಾರ್ಮಿಕನಿಗೆ ಹಲ್ಲೆ- ಆರೋಪ

ಮಕ್ಕಳು ಬಾಬರಿ ಮಸೀದಿ ಧ್ವಂಸ ಘಟನೆ ಮರುಸೃಷ್ಟಿಸಿದ ಎರಡು ವೀಡಿಯೊ  ಇದೀಗ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದ್ದು, ವಿಡಿಯೋದಲ್ಲಿ 27 ವರ್ಷಗಳ ಹಿಂದೆ ಹೇಗೆ ವಿಶ್ವ ಹಿಂದು ಪರಿಷತ್​, ಬಜರಂಗದಳ ಸೇರಿದಂತೆ ಅನೇಕ ಹಿಂದೂ ಸಂಘಟನೆಗಳ ಕರ ಸೇವಕರು ಬಾಬ್ರಿ ಧ್ವಂಸ ಮಾಡಿದರು ಎಂಬುದನ್ನು ಮಕ್ಕಳು ಮರುಸೃಷ್ಟಿ ಮಾಡಿ ಅಭಿನಯಿಸಿದ್ದಾರೆ.

error: Content is protected !!
Scroll to Top