ಎರಡು ಮದುವೆಯಾಗಿ ಐವರು ಮಕ್ಕಳಿದ್ದರೂ ಕಡಿಮೆಯಾಗಿಲ್ಲ ಚಪಲ ➤ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಯತ್ನದ ಆರೋಪಿ ಬಂಧನ

(ನ್ಯೂಸ್ ಕಡಬ) newskadaba.com ಕಡಬ, ಡಿ.16. ಎರಡು ಮದುವೆಯಾಗಿ ಐವರು ಮಕ್ಕಳಿದ್ದರೂ ತನ್ನ ಚಪಲ ತೀರಿಸಲು ಐದನೇ ತರಗತಿಯ ವಿದ್ಯಾರ್ಥಿನಿಯನ್ನು ಅತ್ಯಾಚಾರಕ್ಕೆ ಯತ್ನಿಸಿದ ವಿಕೃತಕಾಮಿಯೋರ್ವನನ್ನು ಕಡಬ ಪೊಲೀಸರು ಬಂಧಿಸಿ ಕಂಬಿ ಹಿಂದೆ ನಿಲ್ಲಿಸಿದ್ದಾರೆ.

ಬಂಧಿತ ಆರೋಪಿಯನ್ನು ಸುಳ್ಯ ತಾಲೂಕಿನ ಎಡಮಂಗಲ ಗ್ರಾಮದ ಕೊಲಂಬೆ ನಿವಾಸಿ ಗೋಪಾಲಕೃಷ್ಣ ಎಂಬವರ ಪುತ್ರ ಶಿವರಾಮ(34) ಎಂದು ಗುರುತಿಸಲಾಗಿದೆ. ಆರೋಪಿಯು ಶನಿವಾರದಂದು ಕಡಬ ತಾಲೂಕಿನ ಕಾಣಿಯೂರು ಸಮೀಪದ ಶಾಲೆಯೊಂದರ ಐದನೇ ತರಗತಿಯ ವಿದ್ಯಾರ್ಥಿನಿಯು ಶಾಲೆಯಿಂದ ಮನೆಗೆ ಹೋಗುತ್ತಿದ್ದ ವೇಳೆ ವಿದ್ಯಾರ್ಥಿನಿಯನ್ನು ಪಕ್ಕದ ಪೊದೆಗೆ ಎಳೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎನ್ನಲಾಗಿದೆ. ವಿದ್ಯಾರ್ಥಿನಿಯು ಕೂಗಿಕೊಂಡಾಗ ಅದೇ ದಾರಿಯಲ್ಲಿ ಮಕ್ಕಳ ಗುಂಪೊಂದು ಬರುತ್ತಿರುವುದನ್ನು ಕಂಡ ಆರೋಪಿಯು ವಿದ್ಯಾರ್ಥಿನಿಯನ್ನು ಬಿಟ್ಟು ಪರಾರಿಯಾಗಿದ್ದಾನೆ. ಈ ಬಗ್ಗೆ ಬಾಲಕಿ ನೀಡಿದ ದೂರಿನಂತೆ ಕಡಬ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Also Read  ಸುಳ್ಯ: ಅಕ್ರಮ ಮರ ಸಾಗಾಟ ➤ ಗ್ರಾ.ಪಂ. ಸದಸ್ಯ ಸಹಿತ ಮೂವರ ಬಂಧನ

error: Content is protected !!
Scroll to Top