ಬೆಳ್ತಂಗಡಿ, ಡಿ.14: ಶಾಸಕ ಹರೀಶ್ ಪೂಂಜಾರ “ಶ್ರಮಿಕ” ಕಚೇರಿ ಈಗ ನಿರುದ್ಯೋಗಿಗಳ ಅಶಾಕಿರಣದ ಕೇಂದ್ರವಾಗಲಿದೆ. ಈಗಷ್ಟೇ ವಿಧ್ಯಾಭ್ಯಾಸ ಮುಗಿಸಿ ಉದ್ಯೋಗ ಅರಸುತ್ತಿರುವ ಉದ್ಯೋಗಾರ್ಥಿಗಳನ್ನು ಹುಡುಕುತ್ತಿರುವ ಸಂಸ್ಥೆಗಳನ್ನು ಸಂಪರ್ಕಿಸುವ, ಅವರಿಗೆ ಬೇಕಾದ ಅರ್ಹ ಅಭ್ಯರ್ಥಿಗಳನ್ನು ಹುಡುಕಿ, ಸಂದರ್ಶನ ಮಾಡಿ ಅಗತ್ಯ ತರಬೇತಿ ನೀಡಿ ನೇಮಕಾತಿಗೆ ಸಹಾಯ ಮಾಡುವ ಪ್ರಯತ್ನ ಬೆಳ್ತಂಗಡಿ ಶಾಸಕ ಹರೀಶ್ ಪೂಂಜರ ಕಚೇರಿ ’ಶ್ರಮಿಕ’ದಲ್ಲಿ ವಿನೂತನ ಯೋಜನೆಯೊಂದನ್ನು ಹಮ್ಮಿಕೊಂಡಿದೆ.
ವಿದ್ಯಾಭ್ಯಾಸವನ್ನು ಮುಗಿಸಿ, ಉದ್ಯೋಗಕ್ಕಾಗಿ ಅಲೆದಾಟ ನಡೆಸುತ್ತಿರುವ, ಬೇರೆ ಬೇರೆ ಉದ್ಯೋಗ ಮೇಳದಲ್ಲಿ ಭಾಗವಹಿಸಿದರೂ ಉದ್ಯೋಗ ದೊರಕದೇ ಇರುವವರಿಗಾಗಿ ಶಾಸಕ ಹರೀಶ ಪೂಂಜ ಅವರ ಹೊಸ ಯೋಜನೆ ಇದಾಗಿದ್ದು, ನಿರುದ್ಯೋಗಿಗಳಿಗೆ ಉದ್ಯೋಗದ ಹೊಸ ಭರವಸೆ ನೀಡಲಿದೆ. ಶಾಸಕರ ಕಚೇರಿಯಲ್ಲಿ ಎಲವೇಟ್ ಲೈಫ್‌ನ ಮೂಲಕ ಮೊದಲ ಅಂಗವಾಗಿ ಬೆಂಗಳೂರಿನ ಪ್ರತಿಷ್ಠಿತ ಕಂಪೆನಿ ಸಂದರ್ಶನ ನಡೆದಿದೆ. ಮೊದಲ ಆದ್ಯತೆಯಾಗಿ ವಿಧ್ಯಾಭ್ಯಾಸ ಮುಗಿಸಿ ಬಂದ ಹೊಸಬರಿಗೆ ಈ ಅವಕಾಶವಿದ್ದು, ಉದ್ಯೋಗಾಂಕ್ಷಿಗಳು ತಮ್ಮಅರ್ಹತೆಯ ಶೈಕ್ಷಣಿಕ ದಾಖಲೆಗಳನ್ನು ಈ ಕೆಳಗಿನ ಇಮೈಲ್‌ಐಡಿಗೆ shramikbelthangadi.jobs@gmail.comshramikbelthangadi.jobs@gmail.com ಕಳುಹಿಸಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕೆಂದು ಶಾಸಕರ ಕಚೇರಿ ’ಶ್ರಮಿಕ’ದ ಪ್ರಕಟಣೆಯಲ್ಲಿ ತಿಳಿಸಿದೆ.