ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಕರಡು ಮತದಾರರ ಪಟ್ಟಿ ಪ್ರಕಟ

ಯಾದಗಿರಿ, ಡಿಸೆಂಬರ್.14. ಕರ್ನಾಟಕ ವಿಧಾನ ಪರಿಷತ್ತಿಗೆ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಕರಡು ಮತದಾರರ ಪಟ್ಟಿಯನ್ನು ಡಿಸೆಂಬರ್ 7ರಂದು ಸಹಾಯಕ ಮತದಾರರ ನೋಂದಣಾಧಿಕಾರಿ, ತಹಸೀಲ್ದಾರ್ ಕಚೇರಿ ಮತ್ತು ನಿಗದಿತ ಸ್ಥಳಗಳಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರ್ಹ ಮತದಾರರು ಡಿಸೆಂಬರ್ 23ರವರೆಗೆ ತಮ್ಮ ಹೆಸರು ಸೇರ್ಪಡೆ, ತಿದ್ದುಪಡಿ ಇತ್ಯಾದಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. 01.11.2019ರ ಅರ್ಹತಾ ದಿನಾಂಕವನ್ನಾಗಿ ಪರಿಗಣಿಸಿ ಅರ್ಹಮತದಾರರು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಈ ಹಿಂದೆ ನವೆಂಬರ್ 6ರವರೆಗೆ ಅವಕಾಶ ಕಲ್ಪಿಸಲಾಗಿತ್ತು. ಜಿಲ್ಲೆಯಲ್ಲಿ ಒಟ್ಟು 1,394 ಮತದಾರರು ತಮ್ಮ ಹೆಸರು ಸೇರ್ಪಡೆ ಮಾಡಿಕೊಂಡಿರುತ್ತಾರೆ. ಇವರ ಪೈಕಿ 1,039 ಪುರುಷರು ಹಾಗೂ 355 ಮಹಿಳಾ ಮತದಾರರು ಇದ್ದಾರೆ.

ಮತಗಟ್ಟೆವಾರು ಮತದಾರರ ವಿವರ: ಶಹಾಪುರ ತಹಸೀಲ್ ಕಾರ್ಯಾಲಯ ಮತಗಟ್ಟೆಯಲ್ಲಿ 294 ಪುರುಷರು, 99 ಮಹಿಳೆಯರು ಸೇರಿ ಒಟ್ಟು 393 ಮತದಾರರಿದ್ದಾರೆ. ಸುರಪುರ ತಹಸೀಲ್ ಕಾರ್ಯಾಲಯ ಮತಗಟ್ಟೆಯಲ್ಲಿ 257 ಪುರುಷರು, 86 ಮಹಿಳೆಯರು ಸೇರಿ ಒಟ್ಟು 343 ಮತದಾರರಿದ್ದಾರೆ. ಹುಣಸಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆಯಲ್ಲಿ 58 ಪುರುಷರು, 6 ಮಹಿಳೆಯರು ಸೇರಿ ಒಟ್ಟು 64 ಮತದಾರರಿದ್ದಾರೆ. ಕೆಂಭಾವಿ ಸರಕಾರಿ ಪದವಿ ಪೂರ್ವ ಕಾಲೇಜು ಮತಗಟ್ಟೆಯಲ್ಲಿ 69 ಪುರುಷರು, 14 ಮಹಿಳೆಯರು ಸೇರಿ ಒಟ್ಟು 83 ಮತದಾರರಿದ್ದಾರೆ. ಕೊಡೆಕಲ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆಯಲ್ಲಿ 43 ಪುರುಷರು, 13 ಮಹಿಳೆಯರು ಸೇರಿ ಒಟ್ಟು 56 ಮತದಾರರಿದ್ದಾರೆ. ಯಾದಗಿರಿ ತಹಸೀಲ್ ಕಾರ್ಯಾಲಯ ಮತಗಟ್ಟೆಯಲ್ಲಿ 211 ಪುರುಷರು, 113 ಮಹಿಳೆಯರು ಸೇರಿ ಒಟ್ಟು 324 ಮತದಾರರಿದ್ದಾರೆ. ಗುರುಮಠಕಲ್ ವಿಶೇಷ ತಹಸೀಲ್ ಕಾರ್ಯಾಲಯ ಮತಗಟ್ಟೆಯಲ್ಲಿ 107 ಪುರುಷರು, 24 ಮಹಿಳೆಯರು ಸೇರಿ ಒಟ್ಟು 131 ಮತದಾರರಿದ್ದಾರೆ.

Also Read  ಬ್ಯಾಟ್ ಹಿಡಿಯುವ ಕೈಯಲ್ಲಿ ಪೊರಕೆ.!! ► ಸ್ವಚ್ಛತಾ ಅಭಿಯಾನಕ್ಕೆ ಕೈಜೋಡಿಸಿದ ಈತ ಯಾರು ಅಂತಿರಾ.??

ಕರಡು ಮತದಾರರ ಪಟ್ಟಿಯಲ್ಲಿ ಇನ್ನೂ ಹೆಸರು ಸೇರ್ಪಡೆಯಾಗದೇ ಉಳಿದಿರುವ ಅರ್ಹ ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಭಾರತದ ಪ್ರಜೆಯಾಗಿರಬೇಕು. ಆ ಕ್ಷೇತ್ರದ ಸಾಮಾನ್ಯ ನಿವಾಸಿಯಾಗಿರುವ ಮತ್ತು 01.11.2019ಕ್ಕೆ ಹಿಂದಿನ 6 ವರ್ಷದ ಅವಧಿಯಲ್ಲಿ ಪ್ರೌಢಶಾಲೆಗಿಂತ ಕಡಿಮೆಯಿಲ್ಲದ ದರ್ಜೆಯಲ್ಲಿ ರಾಜ್ಯದ ಯಾವುದೇ ಶೈಕ್ಷಣಿಕ ಸಂಸ್ಥೆಗಳಲ್ಲಿ ಕನಿಷ್ಠ 3 ವರ್ಷ ಬೋಧನಾ ವೃತ್ತಿಯಲ್ಲಿ ನಿರತನಾಗಿರಬೇಕು. ಬೋಧನಾ ವೃತ್ತಿ ಕುರಿತು ಸಂಬಂಧಿಸಿದ ಸಂಸ್ಥೆಯಿಂದ ಅನುಬಂಧ-2ರಲ್ಲಿ ಪ್ರಮಾಣ ಪತ್ರ ಒದಗಿಸುವುದು ಕಡ್ಡಾಯವಾಗಿರುತ್ತದೆ. ಆದ್ದರಿಂದ ಜಿಲ್ಲೆಯಲ್ಲಿ ಇರುವ ಎಲ್ಲಾ ಅರ್ಹ ಮತದಾರರು ಡಿ.23ರ ಒಳಗೆ ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರ್ಪಡೆ ಮಾಡಲು ನಮೂನೆ-19ರಲ್ಲಿ ಸರಿಯಾದ ಮಾಹಿತಿ ಭರ್ತಿಮಾಡಿ ಅಗತ್ಯ ದಾಖಲೆಗಳೊಂದಿಗೆ ಸಹಾಯಕ ಮತದಾರರ ನೋಂದಣಾಧಿಕಾರಿ ಅಥವಾ ನಿಗದಿತ ಅಧಿಕಾರಿಗಳಾದ ತಹಸೀಲ್ದಾರ್ ಕಚೇರಿಗೆ ಸಲ್ಲಿಸಲು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Also Read  ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ     ➤  ಬೆಂಕಿ ಹಚ್ಚಿಕೊಂಡು ಮೂವರು ಮೃತ್ಯು, ಓರ್ವ ಗಂಭೀರ

error: Content is protected !!
Scroll to Top