ವಿಖಾಯ ತಂಡದ ಸದಸ್ಯರಿಂದ ಶ್ರಮದಾನ

(ನ್ಯೂಸ್ ಕಡಬ) newskadaba.com ಕಡಬ ಡಿ.13. ತೀರಾ ಹದಗೆಟ್ಟಿದ್ದ ಆತೂರಿನಿಂದ ಆತೂರು ಬೈಲ್ ಸಂಪರ್ಕಿಸುವ ರಸ್ತೆಯನ್ನು ವಿಖಾಯದ ಆತೂರು ತಂಡವು ಶ್ರಮದಾನದ ಮೂಲಕ ದುರಸ್ತಿಗೊಳಿಸಿ, ಸಮಾಜಕ್ಕೆ ಮಾದರಿ ಸೇವೆ ನೀಡಿದರು.

ಮಸೀದಿ, ಶಾಲೆ ಹಾಗೂ ದೇವಸ್ಥಾನಗಳಿಗೆ ಹೋಗುವ ಸಾರ್ವಜನಿಕರು ಹಾಗೂ ಶಾಲಾ ಮಕ್ಕಳು ನಡೆದಾಡಲೂ ಕೂಡ ಪ್ರಯಾಸಪಡುವುದನ್ನು ಮನಗಂಡು ಆತೂರು ಕ್ಲಸ್ಟರ್ ವಿಖಾಯ ತಂಡವು ಶ್ರಮದಾನದ ಮೂಲಕ ರಸ್ತೆಯನ್ನು ದುರಸ್ತಿಗೊಳಿಸಿದರು. ಇದರಲ್ಲಿ ವಿಖಾಯ ಆ್ಯಕ್ಟೀವ್ ವಿಂಗ್ ಸದಸ್ಯರಾದ ಝೈನ್ ಆತೂರು, ಫಾರೂಕ್ ಆತೂರು, ಶರೀಫ್ ಆತೂರು, ಜಲೀಲ್ ಆತೂರು ಬೈಲ್, ಅಕ್ಬರ್ ಮೊದಲಾದವರು ಪಾಲ್ಗೊಂಡಿದ್ದರು.

Also Read  ಫೆ1 ಮತ್ತು ಫೆ2 ಆಲಂಕಾರು ಸರಕಾರಿ ಶಾಲಾ ಶತಮಾನೋತ್ಸವ ಸಮಾರಂಭ

error: Content is protected !!
Scroll to Top