ಕಾಸರಗೋಡು: ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ; ಆರೋಪಿಗೆ ಹತ್ತು ವರ್ಷ ಕಠಿಣ ಸಜೆ

ಕಾಸರಗೋಡು, ಡಿ.13: ಹದಿನಾಲ್ಕರ ಹರೆಯದ ಅಪ್ರಾಪ್ತೆ ಬಾಲಕಿಗೆ ವಿವಾಹ ಭರವಸೆ ನೀಡಿ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗೆ ಪೊಕ್ಸೊ  ಕಾಯ್ದೆಯಂತೆ ಹತ್ತು ವರ್ಷ ಕಠಿಣ ಸಜೆ ಮತ್ತು 25 ಸಾವಿರ ರೂ. ದಂಡ ವಿಧಿಸಿ ಕಾಸರಗೋಡು ಜಿಲ್ಲಾ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ತೀರ್ಫು ನೀಡಿದೆ.

 

ಬಂದ್ಯೋಡು ಕುಬಣೂರಿನ ಯಶವಂತ ಯಾನೆ ಅಪ್ಪು (35) ಶಿಕ್ಷೆಗೊಳಗಾದ ಆರೋಪಿ. ಈತ 2014 ರ ಡಿಸಂಬರ್ ನಿಂದ 2015 ರ ಜನವರಿ 19ರ ತನಕ ಹಲವು ದಿನಗಳ ಕಾಲ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದು , ಜನವಾಸವಿಲ್ಲದ ಮನೆಗೆ ಕರೆದೊಯ್ದು ಕೃತ್ಯ ನಡೆಸಿರುವುದಾಗಿ ಪ್ರಕರಣ ದಾಖಲಿಸಲಾಗಿತ್ತು.

Also Read  The Impact of Technology and Communication

ಬಾಲಕಿಯ ವರ್ತನೆಯಿಂದ ಸಂಶಯಗೊಂಡು ತಾಯಿ   ಬಳಿಕ ಮಹಿಳಾ ಸೆಲ್ ಗೆ ದೂರು ನೀಡಿದ್ದರು. ಮಹಿಳಾ ಸೆಲ್ ನ ಮಾಹಿತಿ ಕಲೆ ಹಾಕಿ ಕುಂಬಳೆ ಪೊಲೀಸರಿಗೆ ದೂರು ನೀಡಿದ್ದರು. ಬಾಲಕಿಯನ್ನು ಮಂಗಳೂರು ಹಾಗೂ ಇನ್ನಿತರ ಕಡೆಗೆ ಕರೆದೊಯ್ದಿರುವುದಾಗಿ ತನಿಖೆಯಿಂದ ತಿಳಿದುಬಂದಿತ್ತು.

 

error: Content is protected !!
Scroll to Top