ಕಿಡ್ನಾಪ್: ಮಧ್ಯ ಪ್ರದೇಶದ ಬಾಲಕಿಯರಿಬ್ಬರು ಉಪ್ಪಿನಂಗಡಿಯಲ್ಲಿ ಪತ್ತೆ

ಉಪ್ಪಿನಂಗಡಿ, ಡಿ.13: ಅಪ್ರಾಪ್ತ ವಯಸ್ಸಿನ ಬಾಲಕಿಯರನ್ನು ಅಪಹರಣ ಮಾಡಿದ ಆರೋಪದಲ್ಲಿ ಯುವಕರಿಬ್ಬರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.

ಮಧ್ಯಪ್ರದೇಶದ ಬಸಂತ್ ಸಿರ್ಸಾಗೆ(21) ಹಾಗೂ 17 ಹರೆಯದ ಯುವಕ (ಹೆಸರು ತಿಳಿದು ಬಂದಿಲ್ಲ)ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇವರು ತಮ್ಮ ಊರಿನ ಅಪ್ರಾಪ್ತ ವಯಸ್ಸಿನ ಇಬ್ಬರು ಬಾಲಕಿಯರನ್ನು ಅಪಹರಿಸಿ ಕಾರ್ಮಿಕರಾಗಿ ದುಡಿಸುತ್ತಿದ್ದರೆನ್ನಲಾಗಿದೆ. ಅಲ್ಲದೆ ತನ್ನ ಸ್ನೇಹಿತರ ಬಾಡಿಗೆ ಮನೆಯಲ್ಲಿ ಬಾಲಕಿಯರಿಗೆ ವಾಸಿಸಲು ಅವಕಾಶ ಕಲ್ಪಿಸಿದ್ದರು. ಪ್ರಕರಣದ ಜಾಡು ಹಿಡಿದಿದ್ದ ಮಧ್ಯಪ್ರದೇಶದ ಪೊಲೀಸರು ತಮಗೆ ಸಿಕ್ಕಿರುವ ಮಾಹಿತಿ ಆಧಾರದಲ್ಲಿ ಉಪ್ಪಿನಂಗಡಿಗೆ ಬಂದು ಯುವಕರು ಮತ್ತು ಬಾಲಕಿಯರನ್ನು ಪತ್ತೆಹಚ್ಚಿ ಕರೆದೊಯ್ದಿದ್ದಾರೆ.

Also Read  ಬೆಳ್ತಂಗಡಿ: ಅನುಮಾನಸ್ಪದವಾಗಿ ಗೆಳತಿಯರು ಮೃತಪಟ್ಟ ಪ್ರಕರಣ ➤ ವಿಷಪ್ರಾಶನವೇ ಕಾರಣ ಎಂಬ ಶಂಕೆ

error: Content is protected !!
Scroll to Top