ಬಂಟ್ವಾಳ: ಬಿಜೆಪಿ ಹಿರಿಯ ಮುಖಂಡ ಆನಂದ ನಿಧನ

ಬಂಟ್ವಾಳ, ಡಿ.10: ಬಿಜೆಪಿ ಬಂಟ್ವಾಳ ತಾಲೂಕಿನ ಮಾಜಿ ಅಧ್ಯಕ್ಷ ಹಾಗೂ ಹಿರಿಯ ಕಾರ್ಯಕರ್ತ ಜಿ.ಆನಂದ ಅನಾರೋಗ್ಯ ದಿಂದ ಇಂದು ಮುಂಜಾನೆ ನಿಧನರಾದರು.

ಅವರು 2 ಬಾರಿ ಬಂಟ್ವಾಳ ಪುರಸಭಾ ಸದಸ್ಯ ರಾಗಿ, 2 ಬಾರಿ ಬಂಟ್ವಾಳ ಬಿಜೆಪಿ ಪಕ್ಷದ ಅಧ್ಯಕ್ಷರಾಗಿ, ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನಲ್ಲಿ 3 ಬಾರಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಸಂಸದ ರಾಜ್ಯಧ್ಯಕ್ಷರಾದ ನಳಿನ್‌ ಕುಮಾರ್‌ ಕಟೀಲ್‌, ಡಾ. ಪ್ರಭಾಕರ್ ಭಟ್, ಬಿಜೆಪಿ ಅಧ್ಯಕ್ಷ ದೇವದಾಸ ಶೆಟ್ಟಿ, ಪ್ರಮುಖರಾದ ಗೋವಿಂದ ಪ್ರಭು, ಉದಯಕುಮಾರ್ ಬಂಟ್ವಾಳ ಸಹಿತ ಅನೇಕರು ಸಂತಾಪ ಸೂಚಿಸಿದ್ದಾರೆ.

Also Read  ಪಟಾಕಿ ಅವಾಂತರ..!!! ► ಬಾಲಕನ 2 ಕಣ್ಣು ಹಾಗೂ ಕೈ ಕಾಲುಗಳಿಗೆ ಗಂಭೀರ ಗಾಯ

 

error: Content is protected !!
Scroll to Top