ಬಿಜೆಪಿಯ ಭರ್ಜರಿ ಬ್ಯಾಟಿಂಗ್‌ಗೆ ಸೋಲೊಪ್ಪಿಕೊಂಡ ಕಾಂಗ್ರೆಸ್ ➤ 15 ಕ್ಷೇತ್ರಗಳ ಪೈಕಿ 12 ರಲ್ಲಿ ಅರಳಿದ ಕಮಲ

ಬೆಂಗಳೂರು, ಡಿ.09. ದೇಶದ ಗಮನ ಸೆಳೆದಿದ್ದ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಬಿಜೆಪಿ 12 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಕಾಂಗ್ರೆಸ್ಸನ್ನು ಶಾಕ್ ನೀಡಿದೆ.

15 ಕ್ಷೇತ್ರಗಳ ಪೈಕಿ 12 ಕ್ಷೇತ್ರಗಳಲ್ಲಿ ಜಯಭೇರಿ ಭಾರಿಸುವ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರಕಾರವು ಸ್ಪಷ್ಟ ಬಹುಮತಕ್ಕೆ ಅಗತ್ಯವಿರುವ ಸ್ಥಾನಗಳ ಗಡಿಯನ್ನು ದಾಟಿದೆ. ವಿಧಾನಸಭೆಯಲ್ಲಿ ಪಕ್ಷೇತರ ಸದಸ್ಯರೊಬ್ಬರ ಬೆಂಬಲದೊಂದಿಗೆ 107 ಸ್ಥಾನಗಳನ್ನು ಹೊಂದಿದ್ದ ಬಿಜೆಪಿ, ಇದೀಗ ಉಪ ಚುನಾವಣೆಯ ಫಲಿತಾಂಶದ ಬಳಿಕ ತನ್ನ ಸಂಖ್ಯಾಬಲವನ್ನು 119ಕ್ಕೆ ವೃದ್ಧಿಸಿಕೊಂಡಿದೆ.

ಅಭ್ಯರ್ಥಿಗಳು ಪಡೆದಿರುವ ಮತಗಳ ವಿವರ:

ಕೆ.ಆರ್.ಪುರ: ಭೈರತಿ ಬಸವರಾಜ(ಬಿಜೆಪಿ)-1,39,879, ಎಂ.ನಾರಾಯಣಸ್ವಾಮಿ(ಕಾಂಗ್ರೆಸ್)- 76,436, ಗೆಲುವಿನ ಅಂತರ- 63,443

Also Read  ಪರಿಶಿಷ್ಟರ ಮೀಸಲಾತಿ ಹೆಚ್ಚಳ - ಸಮಾಲೋಚನಾ ಸಭೆ

ಅಥಣಿ: ಮಹೇಶ್ ಕುಮಟಳ್ಳಿ(ಬಿಜೆಪಿ)-99,203, ಗಜಾನನ ಮಂಗಸೂಳಿ(ಕಾಂಗ್ರೆಸ್)-59,214, ಗೆಲುವಿನ ಅಂತರ-39,989.

ಶಿವಾಜಿನಗರ: ರಿಝ್ವಾನ್ ಅರ್ಶದ್(ಕಾಂಗ್ರೆಸ್)-49,890, ಎಂ.ಸರವಣ(ಬಿಜೆಪಿ)-36,369, ಗೆಲುವಿನ ಅಂತರ-13,521.

ಕಾಗವಾಡ: ಶ್ರೀಮಂತ್‌ ಪಾಟೀಲ್(ಬಿಜೆಪಿ)-76,952, ರಾಜು ಕಾಗೆ(ಕಾಂಗ್ರೆಸ್)-58,395, ಗೆಲುವಿನ ಅಂತರ-18,557.

ಗೋಕಾಕ್: ರಮೇಶ್ ಜಾರಕಿಹೊಳಿ(ಬಿಜೆಪಿ)-87,450, ಲಖನ್ ಜಾರಕಿಹೊಳಿ(ಕಾಂಗ್ರೆಸ್)-58,444, ಗೆಲುವಿನ ಅಂತರ-29,006.

ಯಲ್ಲಾಪುರ: ಅರಬೈಲು ಶಿವರಾಮ್ ಹೆಬ್ಬಾರ್(ಬಿಜೆಪಿ)-80,442, ಭೀಮಾ ನಾಯ್ಕ(ಕಾಂಗ್ರೆಸ್)-49,034, ಗೆಲುವಿನ ಅಂತರ-31,408.

ಹಿರೇಕೆರೂರು: ಬಿ.ಸಿ.ಪಾಟೀಲ್(ಬಿಜೆಪಿ)-85,562, ಬಿ.ಎಚ್.ಬನ್ನಿಕೋಡ್(ಕಾಂಗ್ರೆಸ್)-56,495, ಗೆಲುವಿನ ಅಂತರ-29,067.

ರಾಣೆಬೆನ್ನೂರು: ಅರುಣ್‌ ಕುಮಾರ್ ಗೊತ್ತೂರ್(ಬಿಜೆಪಿ)-95,438, ಕೆ.ಬಿ.ಕೋಳಿವಾಡ್(ಕಾಂಗ್ರೆಸ್)-72,216, ಗೆಲುವಿನ ಅಂತರ-23,222.

ವಿಜಯನಗರ: ಆನಂದ್‌ ಸಿಂಗ್(ಬಿಜೆಪಿ)-85,477, ವಿ.ವೈ.ಘೋರ್ಪಡೆ (ಕಾಂಗ್ರೆಸ್)-55,352, ಗೆಲುವಿನ ಅಂತರ-30,125.

ಚಿಕ್ಕಬಳ್ಳಾಪುರ: ಡಾ.ಕೆ.ಸುಧಾಕರ್(ಬಿಜೆಪಿ)-84,389, ಎಂ.ಆಂಜನಪ್ಪ (ಕಾಂಗ್ರೆಸ್)-49,588, ಗೆಲುವಿನ ಅಂತರ-34,801.

ಯಶವಂತಪುರ: ಎಸ್.ಟಿ.ಸೋಮಶೇಖರ್(ಬಿಜೆಪಿ)-1,44,722, ಟಿ.ಎನ್.ಜವರಾಯಿಗೌಡ(ಜೆಡಿಎಸ್)-1,17,023, ಗೆಲುವಿನ ಅಂತರ-27,699.

ಮಹಾಲಕ್ಷ್ಮಿ ಲೇಔಟ್: ಕೆ.ಗೋಪಾಲಯ್ಯ-85,889, ಎಂ.ಶಿವರಾಜು (ಕಾಂಗ್ರೆಸ್)-31,503, ಗೆಲುವಿನ ಅಂತರ-54,386.

Also Read  ಬೆಳಿಗ್ಗೆಯಿಂದಲೇ ಮದ್ಯದಂಗಡಿಯ‌ ಮುಂದೆ ಗ್ರಾಹಕರ ಸರತಿ ಸಾಲು ➤ ನೂಕುನುಗ್ಗಲು ನಿಯಂತ್ರಿಸುವುದು ಪೊಲೀಸರಿಗೆ ಸವಾಲು

ಹೊಸಕೋಟೆ: ಶರತ್ ಬಚ್ಚೇಗೌಡ(ಪಕ್ಷೇತರ)-81,671, ಎಂಟಿಬಿ ನಾಗರಾಜ್(ಬಿಜೆಪಿ)-70,185, ಗೆಲುವಿನ ಅಂತರ-11,486.

ಕೆ.ಆರ್.ಪೇಟೆ: ನಾರಾಯಣಗೌಡ(ಬಿಜೆಪಿ)-66,094, ಬಿ.ಎಲ್.ದೇವರಾಜ್(ಜೆಡಿಎಸ್)-56,363, ಗೆಲುವಿನ ಅಂತರ-9,731.

ಹುಣಸೂರು: ಎಚ್.ಪಿ.ಮಂಜುನಾಥ್(ಕಾಂಗ್ರೆಸ್)-92,725, ಎಚ್.ವಿಶ್ವನಾಥ್(ಬಿಜೆಪಿ)-52,998, ಗೆಲುವಿನ ಅಂತರ-39,727.

error: Content is protected !!
Scroll to Top