ಸರ್ಕಾರಕ್ಕೊಂದು ಸವಾಲ್ ➤ ಭ್ರಷ್ಟಾಚಾರಗಳಿಗೆ ಬುನಾದಿಯಾಗಿರುವ ನೇಮಕಾತಿ ಅವ್ಯವಹಾರವನ್ನು ತಡೆಗಟ್ಟಿ

(ನ್ಯೂಸ್ ಕಡಬ) newskadaba.com ವಿಶೇಷ ಲೇಖನ. ಡಿಸೆಂಬರ್ 6 ಸರಿಯಾಗಿ ಸಂಜೆ 8:30 ಕ್ಕೆ ವಾಟ್ಸಪ್ನಲ್ಲಿ ಬಂದ ಒಂದು ಸಂದೇಶ “ಶಸಸ್ತ್ರ ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆಯಲ್ಲಿ ಗುಲ್ ಮಾಲ್!!!” ಸುವರ್ಣನ್ಯೂಸ್ ರಹಸ್ಯ ಕಾರ್ಯಾಚರಣೆ.

ನನಗೆ ತಿಳಿದ ಕೆಲವೊಂದು ಅಭ್ಯರ್ಥಿಗಳಿದ್ದಾರೆ ಅವರು ಹಗಲು-ರಾತ್ರಿ ಕಷ್ಟಪಟ್ಟು ಸರಕಾರಿ ಕೆಲಸ ಸಿಗಬೇಕೆಂದು ಓದುತ್ತಿದ್ದಾರೆ. ಅವರ ಮನಸ್ಸಿನಲ್ಲಿ ಸರಕಾರಿ ಕೆಲಸವೆಂಬುದು ಕೇವಲ ಒಂದು ಕೆಲಸಕ್ಕಿಂತ ಹೆಚ್ಚಾಗಿ, ಸಮಾಜ ಸೇವೆ ಮಾಡಲು ಸಿಗುವ ಅವಕಾಶವಾಗಿದೆ. ಕೇವಲ ಕೆಲಸದ ಆಸೆ ಯಾಗಿದ್ದರೆ ಅವರನ್ನು ಕೈಬೀಸಿ ಕರೆಯುವ ಖಾಸಗಿ ಕಂಪನಿಗಳಿವೆ, ಅದೇ ರೀತಿ ವಿದೇಶದಲ್ಲಿ ಕೆಲಸವನ್ನು ಮಾಡುತ್ತಿರುವ ಸಂಬಂಧಿಕರು ಉತ್ತಮವಾದ ಅವಕಾಶ ಮಾಡಿಕೊಡಲು ಸಿದ್ಧರಿದ್ದಾರೆ. ಆದರೆ ಎಲ್ಲವನ್ನು ಬಿಟ್ಟು ಸರಕಾರಿ ಕೆಲಸಕ್ಕೆ ಸೇರಬೇಕೆಂಬ ಹಠದಿಂದ ಕುಳಿತಿರುವ ಸ್ನೇಹಿತರಿಗೆ ಈ ಮಾಹಿತಿಯನ್ನು ನೀಡಿದಾಗ ತಡೆಯಲಾಗದ ದುಃಖವಾಗಿತ್ತು.

ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಅಂದರೆ ಸುಮ್ಮನೆನಾ…? 20-25 ವರ್ಷ ತುಂಬಿದ ಯುವಕರು ಕೆಲಸಕ್ಕೆ ಹೋಗದೆ ಮನೆಯಲ್ಲೇ ಕುಳಿತು ಓದುತ್ತಾರೆ ಅಂದರೆ ಅವರ ಮೇಲೆ ಪೂರ್ತಿ ಕುಟುಂಬದವರ ಕಣ್ಣಿರುತ್ತದೆ . ಬಡಕುಟುಂಬಕ್ಕೆ ಸೇರಿದವರಾದರೆ ಕೇಳುವುದೇ ಬೇಡ ಅಪ್ಪ ಮಾಡಿದ ಸಾಲ, ಅನಾರೋಗ್ಯಪೀಡಿತ ತಾಯಿ, ಅಥವಾ ತಂದೆ ಮದುವೆ ವಯಸ್ಸಿಗೆ ಬಂದಿರುವಸಹೋದರಿ. ಎಲ್ಲವನ್ನು ತಲೆಯಲ್ಲಿ ಇಟ್ಟುಕೊಂಡು ತಯಾರಿ ಮಾಡಲು ಯಾರಿಗೆ ಸ್ವಾಮಿ ಸಮಾಧಾನವಿರುತ್ತದೆ.. .???

ದಿನದ ಇಪ್ಪತ್ತನಾಲ್ಕು ಗಂಟೆಯಲ್ಲಿ 8 ಗಂಟೆ ನಿದ್ರೆ, ಮಾಡಿ ಎರಡರಿಂದ ಮೂರು ಗಂಟೆ ವ್ಯಾಯಾಮ ಮಾಡಿ ಉಳಿದಿರೋ 11 ಗಂಟೆಯಲ್ಲಿ ಮೂರು ಹೊತ್ತು ಹೊಟ್ಟೆಗೆ ಹಸಿವಾಗುವಾಗ ಆತನ ತಲೆಯಲ್ಲಿ ಹಸಿವನ್ನು ಹೇಗೆ ತಡೆಯಲಿ..? ಎಂಬ ಆಲೋಚನೆ ಇರುತ್ತದೆಯೇ ಹೊರತು ಗಾಂಧಿ-ಅಂಬೇಡ್ಕರ್, ನೆಹರು, ಚಾಲ್ಸ್ ಡಾರ್ವಿನ್, ಐನ್ಸ್ಟೀನ್, ಮುಂತಾದವರ ಚಿಂತನೆ ಅಥವಾ ಇತಿಹಾಸವಲ್ಲ.

Also Read  ಕಡಬ: ಹೊಸ್ಮಠ ಸೇತುವೆ ಬಳಿ ಅಮಾಯಕ ಜೀವಗಳನ್ನು ಬಲಿಪಡೆದ ಅಪಾಯಕಾರಿ ಹಂಪ್ ➤ ದಿನಂಪ್ರತಿ ನಡೆಯುತ್ತಿದೆ ಸರಣಿ ಅಪಘಾತ ✍? ನಾಗರಾಜ್ ಎನ್.ಕೆ

ಎಲ್ಲವನ್ನು ಸಹಿಸಿ ಕಷ್ಟಪಟ್ಟು ಓದಿದ ಮೇಲೆ ಯಾರಾದರೂ ಒಬ್ಬ ಬಂದು, ನೋಡಪ್ಪ ನಿನಗೆ ನಾನು ಎಕ್ಸಾಮ್ ಪೇಪರ್ ಲೀಕ್ ಮಾಡಿಕೊಡುತ್ತೇನೆ ನನಗೆ 7 ಲಕ್ಷ ಕೊಡು ಅಂದ್ರೆ ಬಡಪಾಯಿ ಎಲ್ಲಿಂದ ಕಿಡ್ನಿ ಮಾರಿ ತರಬೇಕೇ….? ಇಲ್ಲ!! ಇವರು ಪರೀಕ್ಷೆ ಪತ್ರಿಕೆ ಕೊಡುವುದಾದರೆ ನನಗೂ ಬೇಕು ಇಲ್ಲ ಅಂದರೆ ನನಗೆ ಪಾಸಾಗಲು ಸಾಧ್ಯವಿಲ್ಲ ಯಾಕೆಂದರೆ ಎಲ್ಲರೂ ಕಲ್ಲರು. ಎಂದು ತೋಚಿದಾಗ ಈ ಬಡಪಾಯಿ ಪರೀಕ್ಷೆ ಬರೆಯುವ ಆಸೆ ಬಿಟ್ಟು ಯಾರದಾದರೂ ಮನೆಯಲ್ಲಿ ಕೂಲಿ ಕೆಲಸಕ್ಕೆ ಹೋಗಬೇಕು.. ಎಲ್ಲಿಯಾದರೂ ಹಾಗೆ ಮಾಡಿದರೆ ಆತನಿಗೆ ಆಗುವ ನಷ್ಟಕ್ಕಿಂತ ದೇಶಕ್ಕೆ ಮತ್ತು ಆಡಳಿತ ವ್ಯವಸ್ಥೆಗೆ ಆಗುವ ನಷ್ಟವೇ ಹೆಚ್ಚು!!! ಆತನ ಬದಲಿಗೆ ಯಾರಾದರೂ ಮತ್ತೊಬ್ಬ ಸರಿಯಾಗಿ ಅ, ಆ, ಇ, ಈ ಸೇರಿಸಿ ಬರೆಯಲು ಬರದಿದ್ದರೂ ಹಣಕೊಟ್ಟು ಪೇಪರ್ ಪಡೆದು ಕೆಲಸ ಪಡೆಯುತ್ತಾನೆ.

ಇನ್ನು ಆತ 7ಲಕ್ಷ ರೂಪಾಯಿ ಎಲ್ಲಿಂದಾದರೂ ಸಾಲ ಪಡೆದಿದ್ದರೆ ಸಾಲ ತೀರಿಸಲು ಲಂಚ ಪಡೆಯುತ್ತಾನೆಯೋ ಇಲ್ಲವೋ???? ಒಮ್ಮೆ ಲಂಚದ ರುಚಿ ಸಿಕ್ಕ ಮೇಲೆ ಯಾವ ಬೆಕ್ಕು ತಾನೇ ಸುಮ್ಮನೆ ಇರುತ್ತೆ. ನೇಮಕಾತಿಯಲ್ಲಿ ನಡೆಯುವ ಅವ್ಯವಹಾರ ಇಡೀ ಆಡಳಿತ ವ್ಯವಸ್ಥೆಯ ಅವ್ಯವಹಾರಕ್ಕೆ ಬುನಾದಿ ಹಾಕಿದಂತೆ.

ನಾವು ಭ್ರಷ್ಟಾಚಾರದ ವಿರುದ್ಧ.. ನಾವು ಭ್ರಷ್ಟಾಚಾರದ ವಿರುದ್ಧ.. ಎಂದು ಭಾಷಣ ಬಿಗಿದು 70 ವರ್ಷಗಳಿಂದ ಸರಕಾರ ಕಟ್ಟಿಕೊಂಡು ಬಂದಿರುವ ವಿವಿಧ ರಾಜಕೀಯ ಪಕ್ಷಗಳಿಗೆ ನನ್ನದೊಂದು ಸವಾಲ್… ಇದನ್ನು ಸವಾಲಾಗಿಯೋ, ಅಥವಾ ಸಲಹೆಯಾಗಿಯೋ, ಸ್ವೀಕರಿಸುವುದು ನಿಮಗೆ ಬಿಟ್ಟದ್ದು..
“ಒಂದು ಕಾನೂನು ಮಾಡಿ. ಯಾವುದಾದರೂ ಅವ್ಯವಹಾರದಮೂಲಕ ನೇಮಕಾತಿ ಹೊಂದಿದ ಅಧಿಕಾರಿಗಳುತಾವು ಯಾವ ರೀತಿ ನೇಮಕಗೊಂಡಿದ್ದಾರೆ ಎಂಬ ಬಗ್ಗೆ ಮಾಹಿತಿ ಕೊಟ್ಟರೆ ಅವರ ಸಾಮಾಜಿಕ ಕಾಳಜಿಯನ್ನು ಮೆಚ್ಚಿ, ಮುಖ್ಯಮಂತ್ರಿ ಅಥವಾ ರಾಷ್ಟ್ರಪತಿ ಪದಕ ಕೊಡಿ. ಇದಕ್ಕೆ ಕೆ ರಾಷ್ಟ್ರಪತಿ ಪದಕ?? ಎಂದು ಯಾರಾದರೂ ಕೇಳುವುದಾದರೆ ನನ್ನ ಉತ್ತರ ಮೀನು ಹಿಡಿದವರಿಗೆ ಪದಕ ಕೊಡುವಾಗ ಇಂತಹ ತಿಮಿಂಗಲ ಹೇಳಿದವರಿಗೆ ಯಾಕೆ ಕೊಡಬಾರದು…? ಅದರೊಂದಿಗೆ ಡಬಲ್ ಪ್ರಮೋಷನ್ ಮತ್ತು ವೇತನ ಹೆಚ್ಚಳವನ್ನು ಮಾಡಿ. ಮಾಹಿತಿಯನ್ನು ನೀಡದೆ ಸುಮ್ಮನೆ ಇದ್ದವರನ್ನು ಕೆಲಸದಿಂದ ವಜಾಗೊಳಿಸಿ. ಮತ್ತು ಮುಂದೆ ಪರೀಕ್ಷೆ ಬರೆಯುವ ಅವಕಾಶವನ್ನು ರದ್ದುಮಾಡಿ. ಪಾರಿತೋಷಕದ ಆಸೆ ಮತ್ತು ಶಿಕ್ಷೆಯ ಭಯದಿಂದ ಕೆಲವೇ ವರ್ಷಗಳಲ್ಲಿನಾನು ಮುಂದು ತಾನು ಮುಂದು ಎಂದು ಸಾವಿರಾರು ಇಂತಹ ಅಧಿಕಾರಿಗಳು ಮುಂದೆ ಬಂದು ಭ್ರಷ್ಟಾಚಾರವನ್ನು ಬೆಳಕಿಗೆ ತರಬಹುದು.

Also Read  ಜಮೀನು, ಆಸ್ತಿ ಸಮಸ್ಯೆಗಳಿಗೆ ಪ್ರಾಣದೇವರ ಕೃಪೆ ಪಡೆಯಿರಿ.ಮತ್ತು ದಿನ ಭವಿಷ್ಯ ನೋಡಿ.

ಕೆಲವೇ ವರ್ಷಗಳಲ್ಲಿ ದೇಶವು ದಕ್ಷ ಅಧಿಕಾರಿಗಳಿಂದ ತುಂಬಿ ತುಳುಕಬಹುದು ಮತ್ತು ಭಾರತವು ಪ್ರಪಂಚದ ಉತ್ತಮ ಆಡಳಿತ ವ್ಯವಸ್ಥೆ ಹೊಂದಿದ ದೇಶ ಆಗಬಹುದು. ಸಾವಿರ ಭಾಷಣಕ್ಕಿಂತ ಒಂದು ಕೆಲಸ ಮಾಡಿ ಎಲ್ಲಾ ಸರಿ ಆಗಬಹುದು ಮತ್ತು ಅಭ್ಯರ್ಥಿಗಳ ವ್ಯವಸ್ಥೆಯ ಮೇಲಿನ ನಂಬಿಕೆ ಗಟ್ಟಿಯಾಗಬಹುದು.ಮತ್ತು ಸಾವಿರಾರು ಅಭ್ಯರ್ಥಿಗಳು ಲಂಚದ ಭಯದಿಂದ ಸರಕಾರಿ ಸೇವೆಗೆ ಸೇರುವ ಕನಸನ್ನು ಬಿಟ್ಟು ಖಾಸಗಿ ಕಂಪನಿಗಳಿಗೆ ಹೋಗುತ್ತಿದ್ದಾರೆ. ಅಂತಹ ದಕ್ಷ ಅಧಿಕಾರಿಗಳಿಂದ ನಮ್ಮ ದೇಶವು ಸುಂದರ ದೇಶ ವಾಗಬಹುದು.

 

error: Content is protected !!
Scroll to Top