ಬದುಕು ಕಟ್ಟಿಕೊಟ್ಟ ಕುಕ್ಕುಟೋದ್ಯಮ ➤ ಕಾಡ ಕೋಳಿ ಸಾಕಣೆಯಲ್ಲಿ ಯಶ ಕಂಡ ಕಡಬದ ತೋಮಸ್

✍? ಕಿರಣ್ ಕಡಬ

(ನ್ಯೂಸ್ ಕಡಬ) newskadaba.com ಕವರ್ ಸ್ಟೋರಿ. ಕೃಷಿ ಕಾಯಕದಲ್ಲಿ ನಿರತರಾದ ಹಲವಾರು ಕೃಷಿಕರು ಉಪಕಸುಬಾಗಿ ಕೋಳಿ ಸಾಕಾಣೆಯನ್ನು ಲಾಭದಾಯಕ ಉದ್ಯಮವಾಗಿ ಕಂಡುಕೊಂಡಿದ್ದಾರೆ. ನಾಟಿಕೋಳಿ, ಬ್ರಾಯ್ಲರ್, ಟೈಸನ್, ಗಿರಿರಾಜ ಕೋಳಿಯಲ್ಲಿರುವ ವಿಧಗಳು. ಪ್ರತಿ ತಳಿಗಳಿಗೂ ಅದರದೆ ಆದ ಸಾಕಾಣಿಕ ಪದ್ದತಿಗಳಿವೆ ಇಲ್ಲೊಬ್ಬ ರೈತ ಇತರ ಕೃಷಿ ಚಟುವಟಿಕೆಗಳೊಂದಿಗೆ “ಕಾಡಾ” ಕೋಳಿ ಸಾಕಾಣಿಕೆಯಲ್ಲಿ ಸೈ ಎನಿಸಿಕೊಂಡಿದ್ದಾರೆ.
ಕಾಡಾ ಕೋಳಿ ಎಂದರೆ ಕಾಡು ಕೋಳಿ ಅಲ್ಲ. ಜಪಾನಿ ಕೊಯಿಲ್ ಎಂದು ಕರೆಸಿಕೊಳ್ಳುವ ಇದು ಕರ್ನಾಟಕದ ನೆರೆ ರಾಜ್ಯ ಕೇರಳದಲ್ಲಿ ಹೆಚ್ಚಾಗಿ ಮಾಂಸಕ್ಕಾಗಿ ಉಪಯೋಗಿಸುವ ಕೋಳಿ.
ಕೃಷಿಯಲ್ಲಿ ಮಿಶ್ರಬೆಳೆ ಬೆಳೆದರೆ ಮಾತ್ರ ಜೀವನ ಹಸನಾಗುತ್ತದೆ ಎಂದು ನಂಬಿರುವ ಬೆತ್ತೋಡಿಯ ತೋಮಸ್.ಕೆ ಇತರ ವ್ಯವಹಾರದೊಂದಿಗೆ ಕೋಳಿಸಾಕಾಣಿಕೆ ಮಾಡಿಕೊಂಡಿದ್ದಾರೆ.
ಕರಾವಳಿಯಲ್ಲಿ ನಾಟಿಕೋಳಿಗೆ ಪರ್ಯಾಯವಾಗಿ ಬಂದಿರುವ ಕಾಡಾ ಕೋಳಿಯನ್ನು ಕೇರಳಕ್ಕೆ ಹೋದಾಗ ನೋಡಿ ತಾವು ಈ ಕೋಳಿ ಸಾಕಾಣೆ ಮಾಡಬೇಕೆಂದು 100 ಕೋಳಿಗಳನ್ನು ತಂದರು. ಪ್ರಸ್ತುತ ಇವರ ಬಳಿ 600 ಕೋಳಿಗಳಿವೆ.

Also Read  ದುಷ್ಟಶಕ್ತಿಯಿಂದ ಮುಕ್ತಿ ಮತ್ತು ದಿನ ಭವಿಷ್ಯ.

ಕಾಡಾ ಕೋಳಿ ಹೆಚ್ಚಾಗಿ ಕೇರಳದಲ್ಲಿ ಸಾಕಣೆ ಮಾಡುವ ಕಾಡು ಕೋಳಿ ಜಾತಿಗೆ ಸೇರಿದ ಹಕ್ಕಿಯಾಗಿದೆ. ನಾಟಿಕೋಳಿಗಿಂತ ಗಾತ್ರದಲ್ಲಿ ಗಿಡ್ಡ ಹಾಗೂ ಕಾಡು ಕೋಳಿಗಿಂತ ತುಸು ಎತ್ತರ ಇರುವ ಕಾಡಾ ತೂಕ ಕಡಿಮೆ ಇದ್ದರೂ ಭಾರಿ ರುಚಿಕರ ಎಂದು ಹೇಳಲಾಗುತ್ತದೆ. ಒಂದು ಕೋಳಿ ಸರಾಸರಿ 250 ಗ್ರಾಂ ನಿಂದ 400 ಗ್ರಾಂ ವರೆಗೆ ತೂಕ ಬರುತ್ತದೆ. ಕಾಡಾ ಮಾಂಸದಲ್ಲಿ ಹೆಚ್ಚು ಪ್ರೋಟಿನ್ ಇದ್ದು ರುಚಿಕರ ಮತ್ತು ಪೌಷ್ಟಿಕಾಂಶವಿದೆ. ಇದಕ್ಕೆ ಯಾವುದೇ ರೀತಿಯ ರೋಗ ನಿರೋಧಕ ಚುಚ್ಚು ಮದ್ದು ಅಥವಾ ಔಷಧಿ ನೀಡುವ ಅಗತ್ಯವಿಲ್ಲದಿರುವುದರಿಂದ ಸಾಕಾಣಿಕ ವೆಚ್ಚ ಕೂಡ ತೀರ ಕಡಿಮೆ. ಹಲವು ರೋಗಗಳಿಗೆ ದಿವ್ಯ ಔಷಧ ಕಾಡಾ ಮೊಟ್ಟೆ ಕಾಡಾ ಕೋಳಿಯ ಮಾಂಸಕ್ಕಿಂತಲೂ ಇದರ ಮೊಟ್ಟೆಗೆ ಬಹಳ ಬೇಡಿಕೆ ಕಾರಣ ಇದರಲ್ಲಿರುವ ಔಷಧೀಯ ಗುಣಗಳು. ಕೋಳಿಯು 45 ದಿನಗಳಲ್ಲಿ ಮೊಟ್ಟೆ ಇಡಲು ಪ್ರಾರಂಭ ಮಾಡುತ್ತದೆ. ಪ್ರತಿದಿನ ಮೊಟ್ಟೆ ಇಡುತ್ತದೆ. ಮೊಟ್ಟೆ ಇಟ್ಟ 16 ದಿನಗಳಲ್ಲಿ ಒಡೆದು ಮರಿಯಾಗುತ್ತದೆ. ಇದು ಸಂಜೆಯ ಹೊತ್ತಲ್ಲಿ ಮೊಟ್ಟೆಯನ್ನಿಡುತ್ತದೆ. ಮೊಟ್ಟೆಯೊಂದಕ್ಕೆ ಎರಡು ರೂಪಾಯಿಯಿಂದ ಮೂರು ರೂಪಾಯಿಗಳವರೆಗೂ ಮಾರಾಟವಾಗುತ್ತದೆ ಮೊಟ್ಟೆಯು ಉಬ್ಬಸ, ಕ್ಷಯ, ಕೆಮ್ಮು, ಹಸಿವಿಲ್ಲದಿರುವ ಕಾಯಿಲೆಗಳಿಗೆ ಅತ್ಯುತ್ತಮ ಎನ್ನುತ್ತಾರೆ.

Also Read  ಇಂದು (ಮೇ‌.12) ವಿಶ್ವ ದಾದಿಯರ ದಿನ ➤ ರೋಗಿಗಳ ಶುಶ್ರೂಷೆಯ ಪ್ರಮುಖ ಕೇಂದ್ರಬಿಂದು ನರ್ಸ್ ಗಳ ಬಗ್ಗೆ ವಿಶೇಷ ಲೇಖನ

error: Content is protected !!
Scroll to Top