ಕಾಸರಗೋಡು: ಟೆಂಪೊ-ಬೈಕ್ ಢಿಕ್ಕಿ; ಯುವಕ ಮೃತ್ಯು



ಕಾಸರಗೋಡು, ಡಿ.7: ಟೆಂಪೊ ಹಾಗೂ ಬೈಕ್ ನಡುವೆ ಢಿಕ್ಕಿ ಸಂಭವಿಸಿ ಸವಾರ ಮೃತಪಟ್ಟ ಘಟನೆ ಶನಿವಾರ ಸಂಜೆ ನಗರದ ಹೊರವಲಯದ ನಾಯಮ್ಮರ್ ಮೂಲೆಯಲ್ಲಿ ನಡೆದಿದೆ. ಮೃತರನ್ನು ಚೆರ್ಕಳದ ಬೇರ್ಕದ ನಿವಾಸಿ ಶಮ್ಮಾಸ್ (20) ಎಂದು ಗುರುತಿಸಲಾಗಿದೆ.





ಅಪಘಾತದ ತೀವ್ರತೆಗೆ ಗಂಭೀರ ಗಾಯಗೊಂಡಿದ್ದ ಶಮ್ಮಾಸ್‌ನನ್ನು ಕೂಡಲೇ ಕಾಸರಗೋಡು ಆಸ್ಪತ್ರೆಗೆ ದಾಖಲಿಸಲಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ವಿದ್ಯಾನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.






error: Content is protected !!
Scroll to Top