ಮ0ಗಳೂರು ಮೇ 25 ಕರ್ನಾಟಕ ವಾರ್ತೆ:- ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 2017-18ನೇ ಸಾಲಿನಲ್ಲಿ ವಿಶ್ವ ವಿದ್ಯಾನಿಲಯಗಳಲ್ಲಿ ಪಿ.ಹೆಚ್‍ಡಿ ಮತ್ತು ಎಂ.ಫಿಲ್ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ (ಜೆ.ಆರ್.ಎಫ್ ಮಾದರಿ)ಯಲ್ಲಿ ಪ್ರತಿ ಮಾಹೆ ರೂ. 25,000 ಹಾಗೂ ಪ್ರತಿ ವರ್ಷ ಒಂದು ಬಾರಿ ರೂ. 10,000 ವನ್ನು ಫೇಲೋಶಿಫ್ ಮೂಲಕ ನೀಡುವ ಕಾರ್ಯಕ್ರಮವಿರುತ್ತದೆ.
ಈ ಕುರಿತಂತೆ ಮಾಹಿತಿಯು ವೆಬ್‍ಸೈಟ್ ತಿತಿತಿ.goಞಜom.ಞಚಿಡಿ.ಟಿiಛಿ.iಟಿ ನಲ್ಲಿ ಲಭ್ಯವಿದ್ದು ಅರ್ಜಿ ಸಲ್ಲಿಸಲು ಜೂನ್ 10 ಕಡೆಯ ದಿನಾಂಕವಾಗಿದೆ ಎಂದು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.