ನಿರುದ್ಯೋಗಿಗಳಿಗೆ ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ವಿವಿಧ ವೃತ್ತಿಪರ ತರಬೇತಿ

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.6   ಕೇಂದ್ರೀಯ ಪ್ಲಾಸ್ಟಿಕ್ ತಂತ್ರಜ್ಞಾನ ಸಂಸ್ಥೆ, ಭಾರತ ಸರ್ಕಾರ, ಮೈಸೂರಿನಲ್ಲಿ ಕರ್ನಾಟಕ ರಾಜ್ಯದ ಎಸ್‍ಎಸ್‍ಎಲ್‍ಸಿ, ಪಿಯುಸಿ, ಐಟಿಐ, ಜೆಒಸಿ ಡಿಪ್ಲೋಮಾ, ಬಿಇ, ಹಾಗೂ ಯಾವುದೇ ಪದವಿ ಪಾಸ್ ಅಥವಾ ಫೇಲ್ ವಿದ್ಯಾರ್ಹತೆ ಹೊಂದಿರುವ ನಿರುದ್ಯೋಗಿ ಯುವಕ ಯುವತಿಯರಿಗೆ ವಿವಿಧ ವೃತ್ತಿಪರ ಯೋಜನೆಯಡಿ 3 ಮತ್ತು 6 ತಿಂಗಳ ಅವಧಿಯ ಪಾಲಿಮರ್ ವಸ್ತುಗಳ ತಯಾರಿಕ ತಂತ್ರಜ್ಞಾನದ, ವಾಹನಗಳ ಬಿಡಿಭಾಗಗಳು, ವಿದ್ಯುತ್ ಉಪಕರಣಗಳು, ಕಂಪ್ಯೂಟರ್ ಬಿಡಿಬಾಗಗಳು ಇತ್ಯಾದಿ ವಸ್ತುಗಳ ತಯಾರಿಕೆಯ ಬಗ್ಗೆ ಉಚಿತ ಊಟ ವಸತಿಯೊಂದಿಗೆ ತರಬೇತಿ ನೀಡಲಾಗುತ್ತದೆ ಹಾಗೂ ಉದ್ಯೋಗವಕಾಶಕ್ಕೆ ನೆರವು ನೀಡಲಿದ್ದಾರೆ.

Also Read  ಮರ್ಧಾಳ: ಗುಡುಗು ಬರುವಾಗ ಪ್ಲಗ್ ತಪ್ಪಿಸಿದ ಮಹಿಳೆ ► ವಿದ್ಯುತ್ ಶಾಕ್ ಗೆ ಮಹಿಳೆ ಮೃತ್ಯು


ಆಸಕ್ತ ಅಭ್ಯರ್ಥಿಗಳು ವಿದ್ಯಾರ್ಹತೆ ಅಂಕಪಟ್ಟಿ, ಜಾತಿ,ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಮೂಲ ದಾಖಲೆ 4 ಪಾಸ್‍ಪೋರ್ಟ್ ಅಳತೆಯ ಫೋಟೋ ತಂದು ನೇರವಾಗಿ ದಾಖಲಾತಿ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 7899986444, 9141075968, 906664866 ಹಾಗೂ ಸೆಂಟ್ರಲ್ ಇನ್ಸಿಟ್ಯೂಟ್ ಆಪ್ ಪ್ಲಾಸ್ಟಿಕ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ 437  ಹೆಬ್ಬಾಳು ಕೈಗಾರಿಕಾ ಪ್ರದೇಶ, ಮೈಸೂರು ಇವರನ್ನು ಸಂಪರ್ಕಿಸಲು ನಿರ್ದೇಶಕರು ಮತ್ತು ಮುಖ್ಯಸ್ಥರು ಕೇಂದ್ರಿಯ ಪ್ಲಾಸ್ಟಿಕ್ ತಂತ್ರಜ್ಞಾನ ಸಂಸ್ಥೆ ಇವರ ಪ್ರಕಟಣೆ ತಿಳಿಸಿದೆ.

error: Content is protected !!
Scroll to Top