ಪುತ್ತೂರು: ಸ್ಫೋಟಕ ಸಿಡಿದು ಓರ್ವ ಗಂಭೀರ ➤ ನಾಲ್ವರಿಗೆ ಗಾಯ

(ನ್ಯೂಸ್ ಕಡಬ) newskadaba.com ಪುತ್ತೂರು, ಡಿ.06. ಮನೆಯಲ್ಲಿ ಕಚ್ಚಾ ಸ್ಪೋಟಕವನ್ನು ತಯಾರಿಸುತ್ತಿದ್ದ ವೇಳೆ ಸ್ಪೋಟಕ ಸಿಡಿದ ಪರಿಣಾಮ ನಾಲ್ವರು ಗಾಯಗೊಂಡು, ಮನೆಗೆ ಹಾನಿಯಾದ ಘಟನೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬೆಟ್ಟಂಪಲ್ಲಿ ಎಂಬಲ್ಲಿ ಗುರುವಾರದಂದು ನಡೆದಿದೆ.

ಗಾಯಾಳುಗಳನ್ನು ಬೆಟ್ಟಂಪಲ್ಲಿ ನಿವಾಸಿ ಕೇಪುಗೌಡ ಎಂಬವರ ಪುತ್ರ ಬಾಲಕೃಷ್ಣ, ನಾದಿನಿ ವೇದಾವತಿ ಮತ್ತು ಅವರ ಮಕ್ಕಳಾದ ಕಾರ್ತಿಕ್ ಮತ್ತು ಮೋನಿಶಾ ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡಿರುವ ಬಾಲಕೃಷ್ಣರವರನ್ನು ಮಂಗಳೂರಿನ ಎ.ಜೆ.ಆಸ್ಪತ್ರೆಗೆ ದಾಖಲಿಸಲಾಗಿದ್ದು, ಉಳಿದವರನ್ನು ಪುತ್ತೂರಿನ ಹಿತ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕೃಷ್ಣ ರವರು ತನ್ನ ಕೃಷಿಬೆಳೆಗಳಿಗೆ ಹಾನಿ ಮಾಡುವ ಕಾಡುಪ್ರಾಣಿಗಳನ್ನು ಕೊಲ್ಲಲು ಸ್ಪೋಟಕ ಸಾಮಾಗ್ರಿಗಳನ್ನು ತಂದು ಮನೆಯಲ್ಲಿ ಕಚ್ಚಾ ಸ್ಪೋಟಕವನ್ನು ತಯಾರಿಸುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಸ್ಥಳಕ್ಕೆ ಪುತ್ತೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ತನಿಖೆ ಪ್ರಗತಿಯಲ್ಲಿದೆ.

Also Read  ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದ ವತಿಯಿಂದ ವಾಳ್ಯ ಶಾಲೆಯಲ್ಲಿ ಎನ್‍ಎಸ್‍ಎಸ್ ಶಿಬಿರ

error: Content is protected !!
Scroll to Top