ಶಾಲಾ ಬಾವಿಯ ನೀರಿಗೆ ವಿಷ ಬೆರೆಸಿರುವ ಶಂಕೆ ➤ ನೀರು ಕುಡಿದ ಎಂಟು ಮಂದಿ ವಿದ್ಯಾರ್ಥಿಗಳು ಅಸ್ವಸ್ಥ

ಬೆಳ್ತಂಗಡಿ, ಡಿ.02. ವಿಷ ಸೇರ್ಪಡೆಗೊಂಡ ಬಾವಿಯ ನೀರನ್ನು ಸೇವಿಸಿದ ಮಕ್ಕಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿಬಾಜೆಯಲ್ಲಿ ನಡೆದಿದೆ.

ಶಿಬಾಜೆ ಗ್ರಾಮದ ಪೆರ್ಲ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ 8 ವಿದ್ಯಾರ್ಥಿಗಳು ಸೋಮವಾರದಂದು ಶಾಲೆಯ ಆವರಣದಲ್ಲಿರುವ ತರಕಾರಿ ತೋಟಕ್ಕೆ ಬಾವಿಯಿಂದ ನೀರು ಹಾಕುತ್ತಿದ್ದ ಸಂದರ್ಭದಲ್ಲಿ ನೀರನ್ನು ಕುಡಿದಿದ್ದರು. ಕೆಲವೇ ಹೊತ್ತಿನಲ್ಲಿ ಆರನೇ ತರಗತಿಯ ರಾಜೇಶ್, ಮೋನಿಸ್, ಶ್ರವಣ್, ಸುದೀಪ್, ಏಳನೇ ತರಗತಿಯ ಚೇತನ್ ಕುಮಾರ್, ಎಂಟನೇ ತರಗತಿಯ ರಾಧಾಕೃಷ್ಣ, ಸುದೀಶ್ ಹಾಗೂ ಯೋಗೀಶ್ ಎಂಬವರಿಗೆ ಹೊಟ್ಟೆನೋವು ಕಾಣಿಸಿಕೊಂಡು ಅಸ್ವಸ್ಥಗೊಂಡಿದ್ದರಿಂದ ತಕ್ಷಣವೇ ಕೊಕ್ಕಡ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಹಾಗೂ ಬೆಳ್ತಂಗಡಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.

Also Read  ಉಗ್ರರನ್ನು ಸದೆಬಡಿದ ವೀರ ಯೋಧ ಝುಬೇರ್ ಹಳೆನೇರಂಕಿ ಅವರಿಗೆ ಸನ್ಮಾನ

ಇಬ್ಬರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದ್ದು, ಬಾವಿ ಸಮೀಪ ರಬ್ಬರ್‌ಗೆ ಮಿಶ್ರಣ ಮಾಡುವ ಆಸಿಡ್ ಕ್ಯಾನ್ ಕಂಡುಬಂದಿದೆ.

error: Content is protected !!
Scroll to Top