ರಕ್ತದೊತ್ತಡಕ್ಕೆ ಪರಿಣಾಮಕಾರಿ ಔಷಧವೇ ಮಾವಿನ ಎಲೆ

(ನ್ಯೂಸ್ ಕಡಬ) newskadaba.com, ಆರೋಗ್ಯ ಮಾಹಿತಿ, ಡಿ.2.   ಹಣ್ಣುಗಳ ರಾಜ ಎಂದೇ ಕರೆಯಲ್ಪಡುವ ಮಾವಿನಲ್ಲಿ ಕೇವಲ ಹಣ್ಣಿನ ರುಚಿ ಮಾತ್ರವಲ್ಲದೆ, ಹಲವು ಔಷಧ ಗುಣಗಳಿಗೆ ಖ್ಯಾತಿ ಪಡೆದಿದೆ. ಮಾವಿನ ಹಣ್ಣಿನಲ್ಲಿ ಸಿಗುವ ವಿಟಮಿನ್ “ಸಿ’ ಅಂಶ ದೇಹಕ್ಕೆ ರೋಗನಿರೋಧಕ ಶಕ್ತಿ ಒದಗಿಸುತ್ತದೆ. ಮಾವಿನ ಹಣ್ಣಿನ ಜೊತೆಗೆ ಇದರ ಎಲೆಗಳು ಕೂಡ ಅನೇಕ ಔಷಧ ಗುಣಗಳನ್ನು ಹೊಂದಿವೆ.

ರಕ್ತದೊತ್ತಡಕ್ಕೆ ಪರಿಣಾಮಕಾರಿ ಔಷಧ
ಈಗಿನ ದಿನಗಳಲ್ಲಿ ಅಧಿಕ ರಕ್ತದೊತ್ತಡ ಹೆಚ್ಚಾಗಿ ಕಾಣಸಿಗುವ ರೋಗಗಳಲ್ಲಿ ಒಂದಾಗಿದೆ. ಮಾವಿನ ಎಲೆ ಚಹಾ ಸೇವನೆ ರಕ್ತದೊತ್ತಡ ನಿಯಂತ್ರಣಕ್ಕೆ ಔಷಧವಾಗಿದೆ.

ಮಧುಮೇಹ ನಿಯಂತ್ರಣ

ಮಧುಮೇಹಿಗಳಿಗೆ ಮಾವಿನ ಎಲೆಗಳು ಉತ್ತಮವಾದ ಔಷಧ. ಇದರ ಎಲೆಯಲ್ಲಿರುವ ಪೋಷಕಾಂಶಗಳು ರಕ್ತದಲ್ಲಿರುವ ಸಕ್ಕರೆಯ ಅಂಶವನ್ನು ನಿಯಂತ್ರಣದಲ್ಲಿರಿಸುವ ಸಾಮರ್ಥ್ಯ ಹೊಂದಿದೆ. 3 ರಿಂದ 4 ಮಾವಿನ ಎಲೆಗಳನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿದ ನಂತರ ಸುಮಾರು 24 ಗಂಟೆಗಳ ಕಾಲ ಹಾಗೆಯೇ ಬಿಟ್ಟು. ಮರುದಿನ ಬೆಳಗ್ಗೆ ಫಿಲ್ಟರ್ ಮಾಡಿ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಮಧುಮೇಹ ನಿಯಂತ್ರಣಕ್ಕೆ ತರಬಹುದು.

Also Read  ದಂತ ಚಿಕಿತ್ಸೆಗಿದು ಸಮಯವಲ್ಲ!!!

ಸೋಂಕಿನಿಂದ ರಕ್ಷಣೆ

ಮಾವಿನ ಎಲೆಗಳಲ್ಲಿರುವ ಬ್ಯಾಕ್ಟೀರಿಯಾ ನಿವಾರಕ ಮತ್ತು ಔಷಧ ಗುಣಗಳು ಹಲವು ರೀತಿಯ ಬ್ಯಾಕ್ಟೀರಿಯಾಗಳ ಸೋಂಕಿನಿಂದ ದೇಹವನ್ನು ರಕ್ಷಿಸುತ್ತವೆ. ವಿಶೇಷವಾಗಿ ಜೀರ್ಣ ಕ್ರಿಯೆಯಲ್ಲಿ ತೊಂದರೆ ಮತ್ತು ಗಡ್ಡೆಗಳಾಗದಂತೆ ನೋಡಿಕೊಳ್ಳುತ್ತದೆ.

ಅಸ್ತಮಾಕ್ಕೆ ಚಿಕಿತ್ಸೆ

ನೀರಿನಲ್ಲಿ ಮಾವಿನ ಎಲೆಗಳನ್ನು ಕುದಿಸಿ ಕುಡಿಯುವುದರಿಂದ ಅಸ್ತಮಾವನ್ನು ನಿಯಂತ್ರಣದಲ್ಲಿಡಬಹುದು.

ವೈರಸ್ ಗಳ ಸೋಂಕಿನಿಂದ ರಕ್ಷಣೆ

ಮಾವಿನ ಎಲೆಗಳನ್ನು ಕೊಳೆಸಿ ದಾಗ ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್ಗಳು ಹೆಚ್ಚಾ ಗುತ್ತವೆ. ಈ ದ್ರವ ಒಂದು ಉತ್ತಮ ಸೌಂದರ್ಯವರ್ಧಕವೂ ಹೌದು. ವೈರಸಿನ ಸೋಂಕು ಇರುವಲ್ಲಿ ಈ ದ್ರವವನ್ನು ಬಳಸುವುದರಿಂದ ದೇಹದ ರೋಗ ನಿರೋಧಕ ಶಕ್ತಿ ಈ ಸೋಂಕನ್ನು ಎದುರಿಸಲು ಹೆಚ್ಚು ಸಬಲಗೊಂಡಿರುವುದು ಸಂಶೋಧನೆಗಳಲ್ಲಿ ಕಂಡುಬಂದಿದೆ.

Also Read  ಮತ್ತೆ ಮತ್ತೆ ಮರುಕಳಿಸುತ್ತಿರುವ ಮಂಗನ ಖಾಯಿಲೆ - ಡಾ. ಮುರಲೀ ಮೋಹನ ಚೂಂತಾರು

error: Content is protected !!
Scroll to Top