ಶ್ರೀನಿವಾಸ್ ವಿಶ್ವವಿದ್ಯಾಲಯದಲ್ಲಿ ರಾಷ್ಟ್ರೀಯ ಸಮ್ಮೇಳನ

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.2.  ಕಾಲೇಜ್ ಆಫ್ ಮ್ಯಾನೇಜ್‍ಮೆಂಟ್ ಆ್ಯಂಡ್ ಕಾಮರ್ಸ್ ಶ್ರೀನಿವಾಸ್ ವಿಶ್ವವಿದ್ಯಾನಿಲಯ ಸಿಟಿ ಕ್ಯಾಂಪಸ್‍ನಲ್ಲಿ ಶನಿವಾರದಂದು ಬ್ಯಾಂಕಿಂಗ್, ನಿರ್ವಹಣೆ, ಐಟಿ, ಶಿಕ್ಷಣ, ಸಮಾಜ ವಿಜ್ಞಾನದಲ್ಲಿ ನವೀನ ಅಭ್ಯಾಸ (ಇನೋವೇಟಿವ್ ಪ್ರಾಕ್ಟೀಸ್ ಇನ್ ಬ್ಯಾಂಕಿಗ್, ಮ್ಯಾನೇಜ್‍ಮೆಂಟ್, ಐಟಿ, ಎಜುಕೇಶನ್ ಆ್ಯಂಡ್ ಸೋಶಿಯಲ್ ಸೈನ್ಸ್ ಎಂಬ ವಿಷಯದಲ್ಲಿ ರಾಷ್ಟ್ರೀಯ ಸಮ್ಮೇಳನ ನಡೆಯಿತು.


ಮುಖ್ಯ ಅತಿಥಿಗಳಾಗಿ ಆಮಿಸಿದ ಮಂಗಳ ಗಂಗೋತ್ರಿಯ ವಾಣಿಜ್ಯ ನಿಕಾಯದ ಡೀನ್ ಡಾ. ಟಿ. ಎನ್ ಶ್ರೀಧರ್‍ರವರು ವಿವಿಧ ಕ್ಷೇತ್ರಗಳಲ್ಲಾಗುವ ಆವಿಷ್ಕಾರಗಳ ಬಗ್ಗೆ ತಿಳಿಸಿದರು. ಬ್ಯಾಕಿಂಗ್ ನಿರ್ವಹಣೆಯ ವ್ಯವಸ್ಥೆಯಲ್ಲಿಯೂ ಸಂಶೋಧನೆಗಳು ಉಪಯೋಗವಾಗಿದೆ ಎಂದರು. ಅಂತೆಯೇ ಸಂಶೋಧನೆಗಳು ಉನ್ನತ ಶಿಕ್ಷಣದಲ್ಲಿ ಒಂದು ಭಾಗವಾಗಿದ್ದು ಇವುಗಳು ಪೀಳಿಗೆಗಳಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.

Also Read  ಕುಕ್ಕೆ ಶ್ರೀ ಸುಬ್ರಹ್ಮಣ್ಯ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವ ಆರಂಭ ➤ ಡಿ.14ರಂದು ಶ್ರೀ ದೇವರ ಲಕ್ಷದೀಪೋತ್ಸವ


ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀನಿವಾಸ್ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಪಿ. ಎಸ್. ಐತಾಳ್‍ರವರು, ಶ್ರೀನಿವಾಸ್ ವಿಶ್ವವಿದ್ಯಾಲಯದಲ್ಲಾಗುವ ಸಮ್ಮೇಳನಗಳ ಕುರಿತು ಮಾಹಿತಿ ನೀಡಿದರು. ಅಂತೆಯೇ ಸಂಶೋಧನಾ ವಿಧಾನಗಳು ಬದಲಾಗುತ್ತಿರುವ ಕಾಲಮಾನಕ್ಕೆ ಅನುಗುಣವಾಗಿ ಸಹಕಾರಿಯಾಗುತ್ತಿದೆ ಎಂದರು. ಈ ರಾಷ್ಟ್ರೀಯ ಸಮ್ಮೇಳನದಲ್ಲಿ ಶ್ರೀನಿವಾಸ್ ವಿಶ್ವವಿದ್ಯಾನಿಲಯದ ಅಧ್ಯಾಪಕರು ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಬ್ಯಾಂಕಿಂಗ್, ನಿರ್ವಹಣೆ, ಐಟಿ, ಶಿಕ್ಷಣ, ಸಮಾಜ ವಿಜ್ಞಾನದಲ್ಲಿ ನವೀನ ಅಭ್ಯಾಸ ಎಂಬ ವಿಷಯದ ಮೇಲೆ ತಮ್ಮ ವಿಚಾರಗಳನ್ನು ಮಂಡಿಸಿದರು. ಈ ಸಂದರ್ಭ ಸಮ್ಮೇಳದ ಸಂಯೋಜಕ ಅಮಿತ್ ಡೊನಾಲ್ಡ್ ಮಿನೇಜಸ್, ಸಿ.ಎಂ.ಸಿ. ಯ ಡೀನ್ ಡಾ. ಶೈಲಶ್ರೀ ವಿ. ಟಿ. ಉಪಸ್ಥಿತರಿದ್ದರು. ಈ ಸಮ್ಮೇಳನದಲ್ಲಿ ಮಂಡಿತವಾಗಲಿರುವ ಸಂಶೋಧನಾ ಪ್ರಬಂಧಗಳ ಕೈಪಿಡಿ, ಹಾಗೂ ಹಿಂದಿನ ಸಮ್ಮೇಳನಗಳಲ್ಲಿ ಸಂಶೋಧನಾ ವಿದ್ಯಾರ್ಥಿಗಳು ಮಂಡಿಸಿದ ಸಮಗ್ರ ಪ್ರಬಂಧಗಳ ಪುಸ್ತಕವನ್ನು ಈ ಸಂದರ್ಭ ಬಿಡುಗಡೆಗೊಳಿಸಲಾಯಿತು. ಸುಮಾರು 50 ಉಪನ್ಯಾಸಕರು ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಈ ಸಮ್ಮೇಳನದಲ್ಲಿ ಪ್ರಬಂಧಗಳನ್ನು ಮಂಡಿಸಿದರು.

Also Read  ಬಿಜೆಪಿ ಸಕ್ರಿಯ ಸದಸ್ಯತ್ವ ಅಭಿಯಾನ - ಸಂಸದ ಚೌಟರಿಂದ ಸದಸ್ಯತ್ವ ಮರು ನೋಂದಣಿ

error: Content is protected !!
Scroll to Top