ಕಡಬ: ಯುವಕ ನಾಪತ್ತೆ ➤ ಅಪಹರಣ ಶಂಕೆ ವ್ಯಕ್ತಪಡಿಸಿದ ಪೋಷಕರು

(ನ್ಯೂಸ್ ಕಡಬ) newskadaba.com ಕಡಬ, ನ.29. ದನ ಮೇಯಿಸಲೆಂದು ಗುಡ್ಡೆಗೆ ತೆರಳಿದ್ದ ಯುವಕನೋರ್ವ ಹಿಂತಿರುಗದೆ ನಾಪತ್ತೆಯಾಗಿರುವ ಘಟನೆ ಕಡಬ ಠಾಣಾ ವ್ಯಾಪ್ತಿಯ ಆಲಂಕಾರಿನಿಂದ ವರದಿಯಾಗಿದೆ.

ನಾಪತ್ತೆಯಾಗಿರುವ ಯುವಕನನ್ನು ಆಲಂಕಾರು ಗ್ರಾಮದ ಉಜುರುಳಿ ನಿವಾಸಿ ಗೋಪಾಲಕೃಷ್ಣ ಉಪಾಧ್ಯಾಯ ಎಂಬವರ ಪುತ್ರ ಶಿವಕುಮಾರ್ (17) ಎಂದು ಗುರುತಿಸಲಾಗಿದೆ. ಗುರುವಾರ ಬೆಳಿಗ್ಗೆ ದನ ಮೇಯಿಸಲೆಂದು ಗುಡ್ಡೆಗೆ ತೆರಳಿದ್ದ ಈತ ಹಿಂತಿರುಗದೆ ಇದ್ದುದರಿಂದ ಹುಡುಕಾಡಿದ ಪೋಷಕರು ತನ್ನ ಮಗನನ್ನು ಯಾರೋ ಅಪಹರಿಸಿರುವ ಶಂಕೆ ವ್ಯಕ್ತಪಡಿಸಿ ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಕಡಬ: ಮರದಿಂದ ಬಿದ್ದು ವ್ಯಕ್ತಿ ಮೃತ್ಯು

error: Content is protected !!
Scroll to Top