ಬಂಟ್ವಾಳ: ಬೆಳ್ಳಂಬೆಳಗ್ಗೆ ಪತಿ, ಪತ್ನಿಗೆ ತಲವಾರಿನಿಂದ ಇರಿತ ➤ ಮೂವರ ತಂಡದಿಂದ ಕೃತ್ಯ

(ನ್ಯೂಸ್ ಕಡಬ) newskadaba.com ಬಂಟ್ವಾಳ, ನ.29. ಮನೆಗೆ ನುಗ್ಗಿದ ತಂಡವೊಂದು ಗ್ರಾಮ ಪಂಚಾಯತ್ ಸದಸ್ಯ ಹಾಗೂ ಆತನ ಪತ್ನಿಗೆ ತಲವಾರಿನಿಂದ ಮಾರಣಾಂತಿಕ ಹಲ್ಲೆ ನಡೆಸಿ ಬಳಿಕ ಪರಾರಿಯಾದ ಘಟನೆ ಬಂಟ್ವಾಳದಲ್ಲಿ ನಡೆದಿದೆ.

ಗಾಯಾಳುಗಳನ್ನು ಫರಂಗಿಪೇಟೆ ಸಮೀಪದ ಮೇರಮಜಲು ನಿವಾಸಿ ಗ್ರಾಮ ಪಂಚಾಯತ್ ಸದಸ್ಯ ಯೋಗೀಶ್ ಪ್ರಭು ಹಾಗೂ ಅವರ ಪತ್ನಿ ಶೋಭಾ ಎಂದು ಗುರುತಿಸಲಾಗಿದೆ. ಮುಂಜಾನೆ 4 ಗಂಟೆಯ ವೇಳೆ ಮೇರಮಜಲು ನಿವಾಸಿ ಪ್ರಸಾದ್ ಬೆಳ್ಚಾಡ ಮತ್ತು ಅತನ ಇಬ್ಬರು ಸ್ನೇಹಿತರು ಯೋಗೀಶ್ ಪ್ರಭು ಅವರ ಮನೆಗೆ ಬಂದು ಬಾಗಿಲು ಬಡಿದು ಎಚ್ಚರಿಸಿ ಬಾಗಿಲು ತೆರೆಯುವಂತೆ ಕೇಳಿಕೊಂಡಿದ್ದು, ಬಾಗಿಲು ತೆರೆಯುತ್ತಿದ್ದಂತೆ ಮನೆಯೊಳಗೆ ನುಗ್ಗಿದ ಅವರು ಏಕಾಏಕಿ ತಲವಾರಿನಿಂದ ಯೋಗೀಶ್ ಪ್ರಭು ಮೇಲೆ ದಾಳಿ ನಡೆಸಿದ್ದಾರೆ ಎಂದು ಯೋಗೀಶ್ ಪ್ರಭು ಬಂಟ್ವಾಳ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.

Also Read  2019-20ನೇ ಸಾಲಿನ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ➤ಇದರವತಿಯಿಂದ ವಿದ್ಯಾಸಿರಿ ಸಹಾಯಧನಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಆಹ್ವಾನ


ಘಟನಾ ಸ್ಥಳಕ್ಕೆ ಬಂಟ್ವಾಳ ಎ‌ಎಸ್.ಪಿ.ಸೈದುಲು ಅಡಾವತ್, ವೃತ್ತ ನಿರೀಕ್ಷಕ ಟಿ. ಡಿ.ನಾಗರಾಜ್, ಗ್ರಾಮಾಂತರ ಎಸ್.ಐ.ಪ್ರಸನ್ನ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗೆ ಬಲೆಬೀಸಿದ್ದಾರೆ.

error: Content is protected !!
Scroll to Top