ರಸ್ತೆ ಸಂಚಾರದಲ್ಲಿ ಬದಲಾವಣೆ

 (ನ್ಯೂಸ್ ಕಡಬ) newskadaba.com, ಮಂಗಳೂರು, ನ.28. ಮಂಗಳೂರು ಸ್ಮಾರ್ಟ್‍ ಸಿಟಿ ಯೋಜನೆಯಡಿಯಲ್ಲಿ ನಿರ್ಮಾಣಗೊಳ್ಳಲಿರುವ ಪಾದಚಾರಿಗಳ ಭೂಗತ ಮಾರ್ಗದ ಕಾಮಗಾರಿಯನ್ನು ನಗರದ ಕ್ಲಾಕ್ ಟವರ್ ವೃತ್ತದ ಬಳಿ ಇಂದಿನಿಂದ ಪಾರಂಭಿಸಲಾಗುತ್ತಿದೆ.

ಆದುದರಿಂದ ನಗರದ ಎ.ಬಿ.ಶೆಟ್ಟಿ ಸರ್ಕಲ್‍ನಿಂದ ಗಡಿಯಾರ ಗೋಪುರದ ಕಡೆಗೆ ಹಾದು ಹೋಗುವ ರಸ್ತೆಯನ್ನು ಮುಚ್ಚಲಾಗುವುದು.  ಸಾರ್ವಜನಿಕರು ಎ.ಬಿ.ಶೆಟ್ಟಿ ಸರ್ಕಲ್‍ನಿಂದ ಎಡಕ್ಕೆ ತಿರುಗಿ ಹಾಮಿಲ್ಟನ್ ವೃತ್ತ ಮತ್ತು ರಾವ್ & ರಾವ್ ವೃತ್ತವಾಗಿ ಗಡಿಯಾರ ಗೋಪುರದ ಕಡೆಗೆ ಪ್ರಯಾಣಿಸಲು ರಸ್ತೆ ಸಂಚಾರದಲ್ಲಿ ಬದಲಾವಣೆಯನ್ನು ಮಾಡಲಾಗಿದೆ. ಸಾರ್ವಜನಿಕರು ಕಾಮಗಾರಿ ಮುಗಿಯುವವರೆಗೆ ಸಹಕರಿಸಬೇಕಾಗಿ ಮಂಗಳೂರು ಸ್ಮಾರ್ಟ್‍ಸಿಟಿ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆ ತಿಳಿಸಿದೆ.

Also Read  ವೈವಾಹಿಕ ಜೀವನದಲ್ಲಿ ಯಶಸ್ವಿಯಾಗಲು ಪುರುಷರು ಯಾವ ಗುಣಗಳನ್ನು ಹೊಂದಿರಬೇಕು ಗೊತ್ತೇ ?

error: Content is protected !!
Scroll to Top