ನೇತ್ರ ಪರೀಕ್ಷಾ ಶಿಬಿರ

(ನ್ಯೂಸ್ ಕಡಬ) newskadaba.com, ಮಂಗಳೂರು, ನ.28. ಮಂಗಳೂರು ಜಿಲ್ಲಾ ಸಂಚಾರಿ ನೇತ್ರ ಘಟಕ, ವೆನ್‍ಲಾಕ್ ಜಿಲ್ಲಾ ಆಸ್ಪತ್ರೆ, ಮಂಗಳೂರು ಇಲ್ಲಿನ 2019 ನೇ ಡಿಸೆಂಬರ್ ನಲ್ಲಿ ನಡೆಯುವ ನೇತ್ರ ಪರೀಕ್ಷಾ ಶಿಬಿರಗಳ ವೇಳಾಪಟ್ಟಿಯನ್ನು ಈ ಕೆಳಗಿನಂತೆ ಪ್ರಕಟಿಸಲಾಗಿದೆ.

ಡಿಸೆಂಬರ್ 3 ರಂದು ದೈಗೋಳಿ ಸತ್ಯ ಸಾಯಿ ಮಂದಿರ, 10ರಂದು ಪ್ರಾಥಮಿಕ ಆರೋಗ್ಯ ಕೇಂದ್ರ ವಿಟ್ಲ, 13ರಂದು ಕಡಬ, 17ರಂದು ಉಪ್ಪಿನಂಗಡಿ ವ್ಯಾಪ್ತಿ, 20ರಂದು ನೆರಿಯಾ, ಬೆಳ್ತಂಗಡಿ, 24ರಂದು ಪ್ರಾಥಮಿಕ ಆರೋಗ್ಯ ಕೇಂದ್ರ ವಾಮದಪದವು, 27ರಂದು ಪ್ರಾಥಮಿಕ ಆರೋಗ್ಯ ಕೇಂದ್ರ ನಾರಾವಿ,  31ರಂದು ಆನಂದಾಶ್ರಮ  ಪುತ್ತೂರು ವ್ಯಾಪ್ತಿ.  ಸಾರ್ವಜನಿಕರು ಈ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳುವಂತೆ ಜಿಲ್ಲಾ ಶಸ್ತ್ರಚಿಕಿತ್ಸಕರು ಮತ್ತು ಅಧೀಕ್ಷಕರು ವೆನ್ ಲಾಕ್ ಜಿಲ್ಲಾ ಆಸ್ಪತ್ರೆ ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

Scroll to Top