ತಾಲೂಕು ಕಛೇರಿಗೆ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಭೇಟಿ

(ನ್ಯೂಸ್ ಕಡಬ) newskadaba.com ಕಡಬ, ನ.27. ದ.ಕ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‍ರವರು ಬುಧವಾರದಂದು ಕಡಬ ತಾಲೂಕು ಕಚೇರಿಗೆ ಭೇಟಿ ನೀಡಿದರು.

ಸುಬ್ರಹ್ಮಣ್ಯದಲ್ಲಿ ಚಂಪಾ ಷಷ್ಠಿ ಮಹೋತ್ಸವದ ಸಿದ್ದತಾ ಕಾರ್ಯಕ್ರಮಗಳ ಪರಿಶೀಲನೆ ನಡೆಸಿ ಮಂಗಳೂರಿಗೆ ಹಿಂದಿರುಗುವ ವೇಳೆ ಕಡಬ ತಾಲೂಕು ಕಚೇರಿಗೆ ಭೇಟಿ ನೀಡಿದ ಬಳಿಕ ತೆರಳಿದರು. ತಾಲೂಕು ತಹಶೀಲ್ದಾರ್ ಜಾನ್‍ಪ್ರಕಾಶ್ ರೋಡ್ರೀಗಸ್ ಜಿಲ್ಲಾಧಿಕಾರಿಯವರನ್ನು ಸ್ವಾಗತಿಸಿ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ತಾಲೂಕು ಉಪತಹಶೀಲ್ದಾರರಾದ ನವ್ಯ, ಮನೋಹರ ಕೆ.ಟಿ., ಕಂದಾಯ ನಿರೀಕ್ಷಕ ಅವಿನ್‍ರಂಗತ್ತಮಲೆ, ಪ್ರಥಮ ದರ್ಜೆ ಗುಮಾಸ್ತೆ ಭಾರತಿ, ಸಿಬ್ಬಂದಿಗಳಾದ ಆತ್ಮಾನಂದ, ಅಮೃತ, ಕು|ಮಂದಾರ, ವಜ್ರಕುಮಾರ್, ಹರೀಶ್, ಸಂತೋಷ್, ಅರುಣ್, ಉದಯಕುಮಾರ್, ತಾಲೂಕು ಸರ್ವೆಯರ್ ಉದಯಕುಮಾರ್ ಉಪಸ್ಥಿತರಿದ್ದರು.

Also Read  ಜ.19 ರಿಂದ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ

error: Content is protected !!
Scroll to Top