( ನ್ಯೂಸ್ ಕಡಬ) newskadaba.com ಬಂಟ್ವಾಳ, ನ.27. ಮಸ್ಜಿದುಲ್ ಬಿಲಾಲ್ ಮುನೀರುಲ್ ಇಸ್ಲಾಂ ಎಜುಕೇಶನಲ್ ಸೆಂಟರ್ ಏನಾಜೆ ಬುಡೋಳಿಯಲ್ಲಿ ಸ್ಥಾಪನೆಗೊಳ್ಳಲಿರುವ ನೂತನ ಮಸೀದಿಗೆ ಶಿಲಾನ್ಯಾಸ ಕಾರ್ಯಕ್ರಮವು ಬುಧವಾರ ನಡೆಯಿತು. ಮುಖ್ತಾರ್ ತಂಞಲ್ ಕುಂಬೋಲ್ ಶಿಲಾನ್ಯಾಸ ನೆರವೇರಿಸಿದರು. ಸಮಸ್ತ ಕೇಂದ್ರ ಮುಶಾವರ ಸದಸ್ಯ ಬಂಬ್ರಾಣ ಉಸ್ತಾದ್ ದುವಾ ಆಶೀರ್ವಚನ ಮಾಡಿದರು.
ಹಂಝ ತಂಞಳ್ ಪಾಟ್ರಕೋಡಿ, ಇಬ್ರಾಹೀಂ ದಾರಿಮಿ ಗಡಿಯಾರ, ಅಲಿ ಮದನಿ ಜೋಗಿಬೆಟ್ಟು ಗಡಿಯಾರ, ಮಮ್ತಾಜ್ ಆಲಿ ಕೃಷ್ಣಾಪುರ, ನಾಸಿರ್, ಶರೀಫ್ A.M, ಅಮಾನ್, ಬಾವಾಕ, ರಹಮತ್ , ಬಾಷಕ, ಅಬ್ಬು ಹಾಜಿ, ಕುಶಾಲ ಎಂ. ಪೆರಾಜೆ, ನೀಲಯ ಪೆರಾಜೆ, ತಿಮ್ಮಪ್ಪ ಪೆರಾಜೆ, ಹಮೀದ್ ಹಾಜಿ ಮತ್ತಿತರರು ಉಪಸ್ಥಿತರಿದ್ದರು. ಬುಡೋಳಿ ಯೂತ್ ಫೆಡರೇಶನ್ ನ ಸದಸ್ಯರೂ ಉಪಸ್ಥಿತರಿದ್ದರು. ಅಬ್ದುಲ್ ಮಜೀದ್ ದಾರಿಮಿ ಸ್ವಾಗತಿಸಿದರು. ದಿವಂಗತ ಕಾಟಿಪಳ್ಳ ಹೆಚ್.ಕೆ.ಉಬೈದುಲ್ಲ ಇವರ ಸ್ಮರಣಾರ್ಥ ಇವರ ಮಕ್ಕಳಾದ ಪರ್ವೇಜ್ ಮತ್ತು ಸಹೋದರರು ಈ ನೂತನ ಮಸೀದಿಯನ್ನು ಬುಡೋಳಿ ಸಮೀಪದ ಏನಾಜೆಯಲ್ಲಿ ನಿರ್ಮಿಸಲಿದ್ದಾರೆ.