ಚಳಿಗಾಲದಲ್ಲಿ ತ್ವಚೆಯ ರಕ್ಷಣೆ ಹೇಗೆ…?

 (ನ್ಯೂಸ್ ಕಡಬ) newskadaba.com, ಆರೋಗ್ಯ ಮಾಹಿತಿ, ನ.27.  ಕ್ಯಾರೆಟ್ ನ್ನು ಚೆನ್ನಾಗಿ ತೊಳೆದು ಸಿಪ್ಪೆ ಸಮೇತ ರುಬ್ಬಿಕೊಂಡು, ಅದಕ್ಕೆ ಅಲೋವೆರ, ನಿಂಬೆರಸ, ಚಿಟಿಕೆ ಅರಿಶಿನ, ಒಂದು ಚಮಚ ಮುಲ್ತಾನಿ ಮಣ್ಣನ್ನು  ಹಾಕಿ ಮಿಶ್ರಣ ಮಾಡಿಕೊಳ್ಳಬೇಕು. ಅದನ್ನು ಮುಖಕ್ಕೆ ಲೇಪಿಸಿ ಅರ್ಧಗಂಟೆ ಬಿಟ್ಟು ಮುಖವನ್ನು ತೊಳೆದು ಕಾಟನ್ ಬಟ್ಟೆಯಿಂದ  ಒರೆಸಿಕೊಳ್ಳಬೇಕು. ಇದರಿಂದ ಚರ್ಮದ ಕಪ್ಪಾದ ಭಾಗವು ಮಾಯವಾಗುತ್ತದೆ.

ಚಳಿಗಾಲದಲ್ಲಿ ಆಂಟಿ ಆಕ್ಸಿಡೆಂಟ್​ಗಳು ಹೆಚ್ಚಾಗಿರುವ ಆಹಾರಗಳನ್ನು ಸೇವಿಸುವುದು ಒಳ್ಳೆಯದು. ಪಪ್ಪಾಯ, ಸೇಬು, ಬೆಟ್ಟದ ನೆಲ್ಲಿಕಾಯಿ, ಪೇರಲೆ, ಕಿತ್ತಳೆ, ಬೆಣ್ಣೆಹಣ್ಣು ಇಂಥ ಆಹಾರಗಳನ್ನು ಸೇವಿಸುತ್ತಾ ಬಂದಲ್ಲಿ ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳು ಮುಖ್ಯವಾಗಿ ಜೀವಸತ್ವ ‘ಸಿ’ ದೊರೆತು ಚರ್ಮವು ಕಾಂತಿಯುಕ್ತವಾಗುತ್ತದೆ.

ಒಂದು ಚಮಚ ಕಡಲೇಹಿಟ್ಟು ಹಾಗೂ ಹೆಸರುಕಾಳಿನ ಹಿಟ್ಟನ್ನು ತೆಗೆದುಕೊಂಡು ಅದಕ್ಕೆ ಅರ್ಧ ಚಮಚ ಅರಿಶಿಣ, ಶುದ್ಧ ಮೊಸರು ಹಾಗೂ 4 ಹನಿ ಜೇನುತುಪ್ಪವನ್ನು ಹಾಕಿ ಸರಿಯಾಗಿ ಮಿಶ್ರಣ ಮಾಡಿಕೊಂಡು, ಇದನ್ನು ಮುಖದ ಮೇಲೆ ಮಸಾಜ್ ಮಾಡಿಕೊಳ್ಳಬೇಕು. ನಂತರ ಇದರ ಲೇಪಿಸಿ 15 ನಿಮಿಷಗಳ ನಂತರ ತೊಳೆದುಕೊಳ್ಳಬೇಕು. ಇದರಿಂದಾಗಿ ಚರ್ಮವು ಕಾಂತಿಯುತವಾಗುತ್ತದೆ.

Also Read  “ವಿಶ್ವ ಕ್ಯಾನ್ಸರ್ ದಿನ” - ಫೆಬ್ರವರಿ 4” ✍? ಡಾ| ಮುರಲೀ ಮೋಹನ್ ಚೂಂತಾರು

 

ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಗೆ ಕೊತ್ತಂಬರಿ ಸೊಪ್ಪಿನ ಜ್ಯೂಸ್ ಸೇವಿಸುತ್ತಾ ಬಂದರೆ ಚರ್ಮದ ರಕ್ಷಣೆ ಸಾಧ್ಯವಾಗುತ್ತದೆ.. ದಿನನಿತ್ಯದ ಆಹಾರದಲ್ಲಿ ಟೊಮ್ಯಾಟೋದ ಬಳಕೆ ಹೆಚ್ಚಿಸಬೇಕು, ಪಪ್ಪಾಯ ಹಣ್ಣಿನ ಪೇಸ್ಟ್​ಗೆ ಅರ್ಧ ಕಿತ್ತಳೆಹಣ್ಣಿನ ರಸ ಹಾಕಿ ಇದಕ್ಕೆ ಓಟ್ಸ್ ಸೇರಿಸಿ ಮಿಶ್ರಣ ಮಾಡಿ ಚರ್ಮದ ಮೇಲೆ ಲೇಪಿಸಬೇಕು. ಹೀಗೆ ಮಾಡಿದರೆ ಚರ್ಮದ ಮೇಲೆ ಸೂರ್ಯನ ಕಿರಣಗಳಿಂದುಂಟಾದ ಕಪ್ಪು ಕಲೆಗಳು ಕಡಿಮೆಯಾಗುತ್ತವೆ.

error: Content is protected !!
Scroll to Top