ಗಸ್ತು ತಿರುಗುತ್ತಿದ್ದ ವೇಳೆ ವಿಷಜಂತು ಕಡಿತ ➤ ಪಂಜ ವಿಭಾಗದ ಅರಣ್ಯ ರಕ್ಷಕ ಭೀಮಪ್ಪ ಮೃತ್ಯು

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ನ.26. ಕರ್ನಾಟಕ ಅರಣ್ಯ ಇಲಾಖೆಯ ಮಂಗಳೂರು ವಿಭಾಗದ ಪಂಜ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅರಣ್ಯ ರಕ್ಷಕ ಭೀಮಪ್ಪ ಇಲ್ಲಾಳರವರು ವಿಷ ಜಂತು ಕಡಿತಕ್ಕೊಳಗಾಗಿ ಮೃತಪಟ್ಟಿದ್ದಾರೆ.

ಮೂಲತಃ ಬಾಗಲಕೋಟೆ ಜಿಲ್ಲೆಯವರಾದ ಭೀಮಪ್ಪರವರು 2009 ರಲ್ಲಿ ಪಂಜ ವಲಯದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ರಾತ್ರಿ ಗಸ್ತು ತಿರುಗುತ್ತಿದ್ದ ವೇಳೆ ವಿಷ ಜಂತು ಕಡಿತಕ್ಕೊಳಗಾಗಿದ್ದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳವಾರದಂದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

Also Read  ವಿಧಾನಸಭಾ ಚುನಾವಣಾ ಹಿನ್ನೆಲೆ ► ಮೇ 12 ರಂದು ಎಲ್ಲಾ ಸರಕಾರಿ, ಖಾಸಗಿ ನೌಕರರಿಗೆ ವೇತನ ಸಹಿತ ರಜೆ ಘೋಷಣೆ

error: Content is protected !!
Scroll to Top