ನೆಟ್ಟಣ: ರೈಲಿನಡಿಗೆ ತಲೆಯಿಟ್ಟು ಯುವಕ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ನೆಟ್ಟಣ, ನ.26. ರೈಲಿನಡಿಗೆ ತಲೆಯಿಟ್ಟು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ನೆಟ್ಟಣದ ಸುಬ್ರಹ್ಮಣ್ಯ ರೋಡ್ ರೈಲ್ವೇ ನಿಲ್ದಾಣದ ಸಮೀಪ ಸೋಮವಾರ ರಾತ್ರಿ ನಡೆದಿದೆ.

ಸೋಮವಾರ ರಾತ್ರಿ ರೈಲ್ವೆ ಹಳಿಯಲ್ಲಿ ಸ್ಥಳೀಯ ವ್ಯಕ್ತಿಯೋರ್ವರು ನಡೆದುಕೊಂಡು ಹೋಗುತ್ತಿದ್ದ ವೇಳೆ ಯುವಕನ ಮೃತದೇಹವು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಕಂಡುಬಂದಿದ್ದು ತಕ್ಷಣವೇ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮೃತದೇಹದ ಬಳಿ ಬ್ಯಾಂಕ್ ಪಾಸ್ ಪುಸ್ತಕವೊಂದು ದೊರೆತಿದ್ದು, ಅದರಲ್ಲಿ ಮಂಗಳೂರಿನ ಉಳ್ಳಾಲ ರೈಲ್ವೇ ನಿಲ್ದಾಣ ಬಳಿಯ ನಿವಾಸಿ ಪವನ್ ಕುಮಾರ್ ಎಂಬ ವಿಳಾಸ ಪತ್ತೆಯಾಗಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಗೆ ಸುಮಾರು ಮೂವತ್ತು ವರ್ಷ ವಯಸ್ಸಾಗಿರಬಹುದು ಎಂದು ಅಂದಾಜಿಸಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ಏನೆಂದು ತನಿಖೆಯ ನಂತರವಷ್ಟೇ ತಿಳಿದುಬರಬೇಕಿದೆ.

Also Read  ಉಪ್ಪಿನಂಗಡಿ: ಪಿಎಫ್ಐ ವಲಯ ಸಮಿತಿ ವತಿಯಿಂದ ಯುಪಿ ಸರಕಾರದ ನಿರಾಧಾರ ಆರೋಪಗಳು ಹಾಗೂ ಯೋಗಿ ಸರಕಾರದ ವಿರುದ್ದ ಪ್ರತಿಭಟನೆ

error: Content is protected !!
Scroll to Top